ಧ್ಯಾನವೇ ಅತ್ಯುತ್ತಮ ಔಷಧ

HUN-JAN-19-3(OM SHANTHI PROGRARMME)
Published on

ಹುಣಸೂರು : ಪರಮಾತ್ಮನೇ ಅತ್ಯುತ್ತಮ ವೈದ್ಯ, ಧ್ಯಾನವೇ ಅತ್ಯುತ್ತಮ ಔಷಧ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಹುಣಸೂರು ಶಾಖೆ ಸಂಚಾಲಕಿ ಅಕ್ಕ ಗಾಯತ್ರಿ ಹೇಳಿದರು.
ನಗರದ ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ಗುರುವಾರ ಆಯೋಜಿಸಿದ್ದ ಬಾಬಾ ಅವರ ಸ್ಮತಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಜಗತ್ತಿನಲ್ಲಿ ಎಲ್ಲವೂ ನಶ್ವರ, ಪರಮಾತ್ಮನೊಬ್ಬನೇ ಶಾಶ್ವತ. ಎಲ್ಲವೂ ಒಂದಲ್ಲ ಒಂದು ದಿನ ವಿನಾಶವಾಗುವುದು ಖಚಿತ. ಅಧ್ಯಾತ್ಮ ಮಾರ್ಗದ್ಲ ನಾವು ನಡೆಯಬೇಕು. ನಮ್ಮ ದೇಹದ ಹಲವು ಕಾಯಿಲೆಗಳ ಮುಕ್ತಿಗೆ ಧ್ಯಾನವೇ ಅತ್ಯುತ್ತಮ ಮಾರ್ಗವಾಗಿದೆ ಎಂದರು.
ನನ್ನ ಕೈಯಲ್ಲಿ ಏನೂ ಸಾಧ್ಯವಾಗದು ಎಂದು ಕೈ ಚೆಲ್ಲಿ ಕುಳಿತರೆ ಸಾಲದು. ಭಗವಂತನ ನಾಮಸ್ಮರಣೆಯೊಂದಿಗೆ ನಾವು ಮಾಡುತ್ತಿರುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಖಂಡಿತಾ ಉತ್ತಮ ಫಲ ದೊರೆಯುತ್ತದೆ ಎಂದರು.
ವಿವಿ ಮುಖ್ಯಸ್ಥ ಎಚ್.ಎನ್ ಎಸ್ ಮೂರ್ತಿ ಮಾತನಾಡಿ, ನಮ್ಮ ಸಂಸ್ಥೆ ಮದ್ಯವ್ಯರ್ಜನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಧ್ಯಾನ ಮುಂತಾದ ಶಿಬಿರ ನಡೆಸುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ, ಮಡಿವಾಳರ ಸಂಘದ ತಾಲೂಕು ಅಧ್ಯಕ್ಷ ಶಂಕರ್, ಸರ್ವೇಯರ್ ಕುಮಾರ್, ಮುಖಂಡರಾದ ಮಹದೇವು ಬಿಳಿಕೆರೆ, ನಾಗಪ್ಪ ಮಾಸ್ತರ್, ಪ್ರಭು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net