

ಶಿರಾಳಕೊಪ್ಪ: ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಂಗಳವಾರ ಶಿರಾಳಕೊಪ್ಪದ ಹಲವು ಬೂತ್‌ಗಳಿಗೆ ಭೇಟಿ ನೀಡಿ ಕಾರ್ಯಕತರ್ರೊಂದಿಗೆ ಮತದಾನದ ವಿವರ ಪಡೆದರು.
ರಾಘವೇಂದ್ರ ಆಗಮಿಸುತ್ತಿದ್ದಂತೆ ಮತದಾರರು ಅವರೊಂದಿಗೆ ಪೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಘವೇಂದ್ರ, ಶಿವಮೊಗ್ಗ ಕ್ಷೇತ್ರದಲ್ಲಿ ಉತ್ತಮ ಮತದಾನ ವಾಗುತ್ತಿದ್ದು ಶೇ.80ರಷ್ಟು ಮತದಾನ ಆಗುವ ಸಾಧ್ಯತೆ ಇದೆ. ಹೆಚ್ಚು ಮತದಾನ ಆದಷ್ಟು ನಮಗೇ ಲಾಭ ಎಂದರು.
ಜಿಲ್ಲೆಯ ಜನರು ಬುದ್ಧಿವಂತರಿದ್ದು ಚುನಾವಣೆಯಲ್ಲಿ ನನಗೆ ಮತ ಹಾಕಿದರೆ ಮೋದೀಜಿಗೆ ಮತ ಹಾಕಿದಂತೆ ಎಂದು ಭಾವಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದೆ ಎಂದ ಅವರು, ಇತರ ಪಕ್ಷೇತರರಂತೆ ಕೆ.ಎಸ್.ಈಶ್ವರಪ್ಪ ಸಹ ಒಬ್ಬರು ಎಂದು ಹೇಳಿದರು.
ಅಗಡಿ ಅಶೋಕ, ಚೆನ್ನವೀರಶೆಟ್ಟಿ, ಟಿ.ರಾಜು, ಮಂಚಿ ಶಿವಾನಂದ, ಲೋಕೇಶ್, ಎಚ್.ಎಂ.ಚಂದ್ರಶೇಖರ, ಇಂದುಧರ, ಎಚ್.ಎಂ.ಬಸವರಾಜ್, ನಿವೇದಿತಾ ರಾಜು, ಚಂದ್ರಶೇಖರ ಮಂಚಾಲಿ ಇದ್ದರು.