ಬಿಎಸ್ಸಿ ನರ್ಸಿಂಗ್: ಆಪ್ಷನ್ ದಾಖಲಿಗೆ ಮತ್ತಷ್ಟು ಅವಕಾಶ

nursing
Published on

ಬೆಂಗಳೂರು: ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಪ್ರವೇಶ ಸಲುವಾಗಿ ನಡೆಸುವ ವಿಶೇಷ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವವರು, ನ.14ರ ಸಂಜೆ 6ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಸಮಯ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ ಹಾಗೂ ಹೆಚ್ಚುವರಿ ಸೀಟುಗಳ ಲಭ್ಯತೆ ಕಾರಣಕ್ಕೆ ಮತ್ತಷ್ಟು ಸಮಯ ನೀಡಿದ್ದು ಅಭ್ಯರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೀಟು ಹಂಚಿಕೆ ಫಲಿತಾಂಶ ನ.15ರ ಸಂಜೆ 6ಕ್ಕೆ ಪ್ರಕಟಿಸಲಾಗುತ್ತದೆ. ನ.19ರೊಳಗೆ ಶುಲ್ಕ ಪಾವತಿಸಿ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net