ನಂದೀಶ...ಬಸವನ ಮೈ ತಡವದೆ ನಡಿಗೆ ಪೂರ್ಣವಾಗದು ಎಂದ್ರು ಸಿಎಂ ಯಡಿಯೂರಪ್ಪ

CM BSY
Published on

ಕರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಅಲ್ಲಿಂದ ಡಿಸ್​ಚಾರ್ಜ್​ ಆಗಿ ಮನೆಗೆ ಬಂದ ಮೇಲೆ ಮೊದಲಿನಷ್ಟೇ ಲವಲವಿಕೆಯಿಂದ ತಮ್ಮ ನಿತ್ಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ನಿನ್ನೆ ಬೆಂಗಳೂರಿನ ಮಾಣಿಕ್​ ಷಾ ಪರೇಡ್​ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ರಾಜ್ಯದ ಜನರನ್ನು ಉದ್ದೇಶಿಸಿ ಮಾತನ್ನೂ ಆಡಿದ್ದಾರೆ.

ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ತಮ್ಮ ನಿವಾಸದಲ್ಲಿರುವ ಮುದ್ದು ಕರುಗಳಾದ ನಂದೀಶ ಮತ್ತು ಬಸವನನ್ನು ಪರಿಚಯಿಸಿದ್ದಾರೆ. ಯಡಿಯೂರಪ್ಪನವರಿಗೆ ಗೋವುಗಳೆಂದರೆ ಪ್ರೀತಿ ಎಂಬುದು ಗೊತ್ತಿರುವ ವಿಷಯ. ಇಂದು ಟ್ವೀಟ್​ ಮಾಡಿದ ಅವರು, ನನ್ನ ದಿನಚರಿ ಪ್ರಾರಂಭ ಆಗುವುದೇ ನಡಿಗೆಯ ಮೂಲಕ. ಆಗ ಎದುರಾಗುವ ಮುದ್ದಿನ ಕರುಗಳಾದ ನಂದೀಶ ಮತ್ತು ಬಸವನ ಮೈ ತಡವದೆ ನಡಿಗೆ ಪೂರ್ಣವಾಗುವುದಿಲ್ಲ. ಮೂಕ ಪ್ರಾಣಿಗಳ ಪ್ರೀತಿ, ಅಕ್ಕರೆಗಳ ಅಭಿವ್ಯಕ್ತಿ ಹೃದಯ ಮುಟ್ಟುತ್ತದೆ ಎಂದಿದ್ದಾರೆ. ಫೋಟೋವನ್ನೂ ಶೇರ್​ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net