ಬಿ.ಇಡಿ ಪ್ರವೇಶ: ಕಾಲೇಜು ಬದಲಾವಣೆಗೆ ಅವಕಾಶ

B.Ed Students Logo
Published on

ಬೆಂಗಳೂರು 2023-24ನೇ ಸಾಲಿನ ಬಿ.ಇಡಿ ಕೋರ್ಸ್‌ಗೆ ಪ್ರವೇಶ ಪಡೆಯುತ್ತಿರುವ ಅಭ್ಯರ್ಥಿಗಳು ಆದ್ಯತೆ ಮೇರೆಗೆ ಕಾಲೇಜುಗಳನ್ನು ಬದಲಾವಣೆ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯು ಅವಕಾಶ ನೀಡಿದೆ.

ಡಿ.22ರಿಂದ 24ರ ಸಂಜೆ 6 ಗಂಟೆಯವರೆಗೆ ಸಮಯ ನೀಡಿದ್ದು, ಅಭ್ಯರ್ಥಿಗಳು ಆನ್‌ಲೈನ್ ಲಾಗಿನ್ ಆಗಿ ಕಾಲೇಜುಗಳ ಹೆಸರುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಬಿ.ಇಡಿ ಪ್ರವೇಶಕ್ಕೆ ಸಂಬಂಧಿಸಿದಂತೆ ಡಿ.14ರಂದು ಪ್ರಕಟಿಸಿರುವ ರೋಸ್ಟರ್ ಮತ್ತು ಮೆರಿಟ್ ಅನ್ವಯ 1:2 ಅನುಪಾತ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನಾ ಪ್ರಕ್ರಿಯೆಯನ್ನು ನೋಡಲ್ ಕೇಂದ್ರದಲ್ಲಿ ನಡೆಸಲಾಗಿದೆ. ಈ ಅಭ್ಯರ್ಥಿಗಳು ಕಾಲೇಜು ಬದಲಾವಣೆಗೆ ಅರ್ಹರಿರುತ್ತಾರೆ ಎಂದು ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್ www.schooleducation.karnataka.gov.in ಗೆ ಭೇಟಿ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net