

ಹಗರಿಬೊಮ್ಮನಹಳ್ಳಿ: ಮಹಿಳೆಯರು ಸ್ವಾವಲಂಬಿಗಳಾಗಲು ಗುಡಿಕೈಗಾರಿಕೆ ಸಹಕಾರಿ ಎಂದು ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ ಹೇಳಿದರು.
ಇದನ್ನೂ ಓದಿ: ಮೈಸೂರಿನಲ್ಲಿ ಪುರುಷರು, ಮಹಿಳೆಯರಿಗೆ ಮ್ಯಾರಥಾನ್
ತಾಲೂಕಿನ ಗದ್ದಿಕೆರೆ ಗ್ರಾಪಂ ಆವರಣದಲ್ಲಿರುವ ಗ್ರಾಪಂ ಕಚೇರಿ ಮೇಲ್ಭಾಗದಲ್ಲಿ 17.5ಲಕ್ಷ ರೂ.ಗಳ ವೆಚ್ಚದಲ್ಲಿ, ಸೂರ್ಯೋದಯ ಸಂಜೀವಿನಿ ಒಕ್ಕೂಟದ ಕಟ್ಟಡ ಉದ್ಘಾಟನೆಯಲ್ಲಿ ಗುರುವಾರ ಮಾತನಾಡಿದರು.
ಮಹಿಳೆಯರು ಅನೇಕ ಸಂಘಗಳಲ್ಲಿ ಸಾಲ ಮಾಡಿ, ಸ್ವಂತ ಬದುಕು ಕಟ್ಟಿಕೊಳ್ಳಲು ಹೋಗಿ ಸಾಲ ತೀರಿಸಲಾಗದೆ, ಮಾನಕ್ಕೆ ಅಂಜಿ ಜೀವನ ನಿರ್ವಹಿಸಬೇಕಾಗುತ್ತೆ. ಆದ್ದರಿಂದ ಅತ್ಯಂತ ಕಡಿಮೆ ಬಡ್ಡಿಯಾಗಿ ಬಿಡಿಸಿಸಿ ಬ್ಯಾಂಕ್‌ನಲ್ಲಿ ಮಹಿಳಾ ಸಂಘಕ್ಕೆ ಸಾಲ ನೀಡಲಾಗುವುದು ಈ ಸೌಲಭ್ಯ ಪಡೆದುಕೊಳ್ಳಿ. ವರುಣನ ಕೃಪೆಯಿಂದ ಕ್ಷೇತ್ರದೆಲ್ಲೆಡೆ ಉತ್ತಮ ಮಳೆಯಾಗಿದ್ದು, ಬಹುತೇಕ ಹಳ್ಳಕೊಳ್ಳಗಳು, ಕೆರೆಗಳು ಭರ್ತಿಯಾಗಿವೆ ಇದರಿಂದ ರೈತರಿಗೆ ಅನುಕೂಲ ಎಂದರು.
ಜಿ.ಕೋಡಿಹಳ್ಳಿ ಕೆರೆಗೆ ಬಾಗೀನ ಅರ್ಪಿಸಲಾಯಿತು. ಡಾ.ಮಹೇಶ್ವರ ಸ್ವಾಮೀಜಿ, ಗದ್ದಿಕೆರೆ ಚರಂತೇಶ ಸ್ವಾಮೀಜಿ, ಬೆಣ್ಣಿಹಳ್ಳಿ ಪಂಚಾಕ್ಷರಿ ಶಿವಚಾರ್ಯ, ಸಂಡೂರಿನ ಕೃಷ್ಣಪಾದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ರಾಮಪ್ಪ ಛಲವಾದಿ, ಗ್ರಾಪಂಗಳ ಸದಸ್ಯರ ಒಕ್ಕೂಟದ ಅಧ್ಯಕ್ಷೆ ಟಿ.ಮಮತಾ, ಮುಖ್ಯಶಿಕ್ಷಕ ನಾಗೇಂದ್ರಪ್ಪ, ನರೇಗಾ ಸಹಾಯಕ ಅಧಿಕಾರಿ ರಮೇಶ್ ಮಹಾಲಿಂಗಪುರ, ಪಿಡಿಒ ಮಲ್ಲೇಶನಾಯ್ಕ, ಸದಸ್ಯರಾದ ಸುರೇಶ್ ಪೂಜಾರ್, ಬಸಮ್ಮ ಎಚ್.ದೊಡ್ಡಬಸಪ್ಪ,
ಗಡ್ಡಿ ಶೋಭಾ ತೋಟಜ್ಜ, ಅಂಜಿನಮ್ಮ ದುರುಗಪ್ಪ, ಭುಜಲಿಂಗಪ್ಪ ಅನಕುಂಟಿ, ಮುರ‌್ಲಾಪುರ ಲತಾ ಭೀಮಾರೆಡ್ಡಿ, ಕಾತ್ರಿಕಿ ಸಾವಿತ್ರಿ ಬಸವರಾಜ, ಜಿ.ಎಂ.ನಾಗರತ್ನ ಸಣ್ಣಬಸಯ್ಯ, ಪ್ರಮುಖರಾದ ಸುಗ್ನಳ್ಳಿ ಮಂಜುನಾಥ ರೆಡ್ಡಿ, ಡಣಾಪುರ ದೊಡ್ಡಬಸಪ್ಪ, ಟಿ.ವೀಣಾ, ಕೊಟ್ರೇಶ್ ಸಕ್ರಿಹಳ್ಳಿ, ಹೊಳಗುಂದಿ ಆನಂದ, ಆರ್.ವೆಂಕಟೇಶ, ಡಿ.ಎಂ.ಬಸವರಾಜ್, ಜಿ.ನಿಂಗಪ್ಪ, ಡಾ.ಹಾಲಮ್ಮ, ಮದ್ದಾನಸ್ವಾಮಿ ಇದ್ದರು.