

ಶಿಕಾರಿಪುರ: ಆಯಸ್ಸು ವೃದ್ಧಿಮಾಡುವ ಅದ್ಭುತವಾದ ಚಿಕಿತ್ಸಾ ಕ್ರಮ ಆಯುರ್ವೇದ. ಇದೊಂದು ದೈವೀ ಚಿಕಿತ್ಸೆ. ಇದು ನಮ್ಮ ಋಷಿಮುನಿಗಳ ಕೊಡುಗೆ ಎಂದು ಆಯುರ್ವೇದ ವೈದ್ಯ ಡಾ. ಮಹಂತೇಶ್ ಹೇಳಿದರು.
ಪ್ರಕೃತಿ ಚಿಕಿತ್ಸಾಲಯ, ಐಶ್ವರ್ಯ ಹೋಮಿಯೋ ಾರ್ಮಸಿ ಶಿಕಾರಿಪುರ, ಶಿವಮೊಗ್ಗದ ಪಂಚಮಸಾಲಿ ಸಮಾಜ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಗವಂತನ ಸ್ವರೂಪಿ ಧನ್ವಂತರಿ ಮುನಿಗಳ ಮುಖೇನ ಜಗಕ್ಕೆ ಪಸರಿಸಿದ ವಿದ್ಯೆ ಆಯುರ್ವೇದ. ಭಗವಾನ್ ವಿಷ್ಣು ಮನುಕುಲದ ಒಳಿತಿಗಾಗಿ ಆರೋಗ್ಯ ದೇವತೆಯಾಗಿ ಅವತರಿಸಿದ ದಿನವನ್ನು ಶ್ರೀ ಧನ್ವಂತರಿ ಜಯಂತಿ ಎಂದು ಆಚರಿಸಲಾಗುತ್ತದೆ ಎಂದರು.
ಆಯುರ್ವೇದ ಸನಾತನ ಮತ್ತು ವೇದ ಮಂತ್ರಗಳ ಆಧಾರಿತ ಚಿಕಿತ್ಸೆ. ವಿದೇಶಿಗರು ಆಯುರ್ವೇದದ ಮಹತ್ವ ಕಂಡುಕೊಂಡಿದ್ದಾರೆ. ಆದರೆ ನಾವು ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ನಿರ್ಲಕ್ಷಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಧನ್ವಂತರಿ ವನದಲ್ಲಿ ಧನ್ವಂತರಿ ಹೋಮ, ಅಭಿಷೇಕ, ಧನ್ವಂತರಿ ಪೂಜೆ ಮಾಡಲಾಯಿತು. ಡಾ. ನಾಗವೀಣಾ ಪಾಟೀಲ್, ಮಹೇಂದ್ರ, ಶಿಕ್ಷಕಿಯರಾದ ಅನುಷಾ, ಮಹೇಂದ್ರ, ಲತಾ, ಸಮಾಜ ಸೇವಕರಾದ ಆರ್.ಜಯಣ್ಣ ಧನ್ಯಮಯಿ ಭಾಗವಹಿಸಿದ್ದರು.