ರಾಮಮಂದಿರ ಉದ್ಘಾಟನೆಗೆ ಬಂದ ಅತಿಥಿಗಳಿಗೆ ವಿಶೇಷ ಉಡುಗೊರೆ ಏನು ಗೊತ್ತಾ?

Rama Lalla
Published on

ಉತ್ತರಪ್ರದೇಶ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸುದೀರ್ಘ ಕಾಯುವಿಕೆಗೆ ಸೋಮವಾರ ಫಲ ಫಲಿಸಿತು. ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗಾಗಿ ಅತಿಥಿಗಳು ಅಯೋಧ್ಯೆಗೆ ಆಗಮಿಸಿದರು. ಅಯೋಧ್ಯೆಗೆ ಬಂದಿರುವ ಅತಿಥಿಗಳಿಗೆ ವಿಶೇಷ ಉಡುಗೊರೆ ನೀಡಲಾಗಿದೆ. ಈ ಉಡುಗೆರೆಯಲ್ಲಿ ಏನಿದೆ ಗೊತ್ತಾ?

ಧರ್ಮದ ಆಧಾರಸ್ತಂಭವಾಗಿ ನಿಂತಿರುವ ಶ್ರೀರಾಮ ಚಂದ್ರಮೂರ್ತಿ ಹುಟ್ಟಿದ್ದು ಅಯೋಧ್ಯೆಯಲ್ಲಿ. ಕೋಟ್ಯಂತರ ಭಕ್ತರ ಹೃದಯ ರೋಮಾಂಚನಗೊಂಡು ಇಡೀ ದೇಶವೇ ರಾಮನಾಮ ಜಪಿಸುತ್ತಿದ್ದರೆ ಸೋಮವಾರ ಮಧ್ಯಾಹ್ನ ಅಭಿಜಿತ್ ಲಗ್ನದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ವೈಜ್ಞಾನಿಕವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದ ನೆರವೇರಿತು. ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗಾಗಿ ಅತಿಥಿಗಳು ಅಯೋಧ್ಯೆಗೆ ಆಗಮಿಸಿದರು.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಅಯೋಧ್ಯೆಯಲ್ಲಿ ನಡೆದ ಪ್ರಾಣಪ್ರತಿಷ್ಠಾ ಸಮಾರಂಭಕ್ಕೆ ದೇಶ ವಿದೇಶಗಳ ಸುಮಾರು 7000 ಗಣ್ಯರಿಗೆ ಆಹ್ವಾನ ನೀಡಿದೆ. ಅವರಲ್ಲಿ ರಾಜಕೀಯ, ಸಿನಿಮಾ, ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳೂ ಇದ್ದರು. ಆದರೆ ಈ ಅಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶೇಷ ಪ್ರಸಾದದ ಜತೆಗೆ ಉಡುಗೊರೆಗಳನ್ನು ನೀಡಿತು. ಅತಿಥಿಗಳಿಗೆ ನೀಡಿದ ಉಡುಗೊರೆಗಳ ಪೈಕಿ.. ಸ್ವೀಟ್ ಬಾಕ್ಸ್ ಗಳ ಜತೆಗೆ ಕೆಲ ವಸ್ತುಗಳನ್ನೂ ಬ್ಯಾಗ್ ನಲ್ಲಿ ಹಾಕಿ ಅತಿಥಿಗಳಿಗೆ ನೀಡಲಾಯಿತು.

ಅತಿಥಿಗಳಿಗೆ ನೀಡಿದ ಬ್ಯಾಗ್‌ನಲ್ಲಿ ಹೊಸ ದೇವಸ್ಥಾನದ ಗ್ರಾಫಿಕ್ ಚಿತ್ರ ಹಾಗೂ ಬಲರಾಮನ ಅವತಾರವನ್ನು ಮುದ್ರಿಸಲಾಗಿತ್ತು. ಅದರಲ್ಲಿ ಅಯೋಧ್ಯೆಯ ಕುರಿತಾದ ಪುಸ್ತಕ, ಲೋಹದ ದೀಪ, ತುಳಸಿ ಜಪಮಾಲೆ ಮತ್ತು ಭಗವಾನ್ ರಾಮನ ಹೆಸರಿನ ಸ್ಕಾರ್ಫ್ ಅನ್ನು ಒಳಗೊಂಡಿರುವ ವಿಶೇಷ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಶುಂಠಿ ಮಿಠಾಯಿ, ರಾಮದಾನ ಚಿಕ್ಕಿ, ಗೋಡಂಬಿ, ಒಣದ್ರಾಕ್ಷಿಗಳಿಂದ ಮಾಡಿದ ನಾಲ್ಕು ಲಡ್ಡುಗಳನ್ನು ಪ್ರಸಾದವಾಗಿ ನೀಡಲಾಯಿತು. ಈ ಎಲ್ಲ ಉಡುಗೊರೆಗಳನ್ನು ಬ್ಯಾಗ್​ನಲ್ಲಿ ನೀಡಲಾಗಿದ್ದು, ಅದರ ಮೇಲೆ ಹೊಸ ರಾಮಮಂದಿರ ಮತ್ತು ಭಗವಾನ್ ರಾಮನ ಆಕರ್ಷಕ ಗ್ರಾಫಿಕ್ ಫೋಟೋವನ್ನು ಮುದ್ರಿಸಲಾಗಿದೆ. ಪುಸ್ತಕದ ಶೀರ್ಷಿಕೆ ‘ಅಯೋಧ್ಯಾಧಾಮ-ಭಗವಂತನ ನಿವಾಸ’ ಎಂದಿದ್ದು, ಪುಸ್ತಕದ ಮುಖಪುಟದಲ್ಲಿ ಬಾಲರಾಮನ ಹಳೆಯ ವಿಗ್ರಹದ ಚಿತ್ರವೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net