ರಾಮ ಮಂದಿರದ ಅರ್ಚಕರಿಗೆ ವಿಶಿಷ್ಟ ಡ್ರೆಸ್ ಕೋಡ್ ಜಾರಿ..Ayodhya Ram Mandir Priests To Don New Dress

Ayodhya
Published on

Ayodhya Ram Mandir Priests To Don New Dress : ರಾಮಮಂದಿರದ ವೈಭವ ಮತ್ತು ಭವ್ಯತೆಯಿಂದ ಕೂಡಿದೆ.  ಅರ್ಚಕರು ಈಗ ಅವರಿಗೆ 'ವಿಶಿಷ್ಟ ಗುರುತನ್ನು' ಗುರುತಿಸಲು ವಿಶಿಷ್ಟವಾದ ಬಟ್ಟೆಗಳನ್ನು ಧರಿಸಲಿದ್ದಾರೆ. ಪುರೋಹಿತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ವಸ್ತ್ರ ಸಂಹಿತೆ ಜಾರಿ ಮಾಡಿದೆ.

ರಾಮಮಂದಿರದಲ್ಲಿನ ಬಾಲರಾಮನ ದರ್ಶನವನ್ನು ಭಕ್ತರು ನಿತ್ಯ ಪಡೆಯುತ್ತಿದ್ದಾರೆ. ಇನ್ಮುಂದೆ ಅಯೋಧ್ಯೆ ರಾಮ ಮಂದಿರದ ಪೂಜಾ ಕಾರ್ಯಗಳನ್ನು ನೆರವೇರಿಸುವ ಪುರೋಹಿತರಿಗೆ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.

ಪುರೋಹಿತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ವಸ್ತ್ರ ಸಂಹಿತೆ ಜಾರಿ ಮಾಡಿದೆ. ಎಲ್ಲ ಪುರೋಹಿತರಿಗೆ ಎರಡು ಸೆಟ್ ಹಳದಿ ನಿಲುವಂಗಿ, ಬಿಳಿ ಧೋತಿಗಳನ್ನು ನೀಡಲಾಗಿದೆ. ಇನ್ಮುಂದೆ ದೇವಾಲಯದಲ್ಲಿ ಇದೇ ಬಟ್ಟೆಗಳನ್ನು ಧರಿಸಲಿದ್ದಾರೆ.

ಪುರೋಹಿತರು, ಬಾಲರಾಮನ ಪೂಜೆ ಮಾಡಬೇಕು. ಇದರ ಜೊತೆಗೆ ಗರ್ಭಗುಡಿಯೊಳಗೆ ಫೋನ್​ಗಳ ಬಳಕೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಸೇರಿದಂತೆ ಒಟ್ಟು 14 ಅರ್ಚಕರು ರಾಮಮಂದಿರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಅರ್ಚಕರಿಗೆ ಡ್ರೆಸ್ ಕೋಡ್ ಎನ್ನುವುದು ಇರಲಿಲ್ಲ. ಈಗ ಎಲ್ಲ ಅರ್ಚಕರಿಗೂ ವಸ್ತ್ರ ಸಂಹಿತೆ ಜಾರಿ ಮಾಡಿ ಬಟ್ಟೆಗಳನ್ನು ನೀಡಲಾಗಿದೆ. ರಾಮ ಮಂದಿರದಲ್ಲಿ ಪೂಜೆ ಸಲ್ಲಿಸುವ 14 ಅರ್ಚಕರ ಪೈಕಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು ಬೆಳಗಿನ ಪಾಳಿಗೆ ಏಳು ಪುರೋಹಿತರು, ಮಧ್ಯಾಹ್ನದ ಪಾಳಿಗೆ ಏಳು ಪುರೋಹಿತರು ಇರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net