

ಅಯೋಧ್ಯೆ: ( Wedding Night ) ಮದುವೆಯ ಮೊದಲ ರಾತ್ರಿಯೇ ನವವಿವಾಹಿತ ದಂಪತಿ ಜೀವ ಕಳೆದುಕೊಂಡ ಘಟನೆ ಉತ್ತರಪ್ರದೇಶದ ಅಯೋಧ್ಯೆಲ್ಲಿ ನಡೆದಿದೆ.
ಪ್ರದೀಪ್ ಹಾಗೂ ಶಿವಾನಿ ಮೃತ ದಂಪತಿ. ನಡುರಾತ್ರಿಯಲ್ಲಿ ಗಂಡನ ಫೋನ್ಗೆ ಬಂದ ಒಂದು ಮೆಸೇಜ್ ದಂಪತಿ ನಡುವೆ ಕೋಲಾಹಲವನ್ನು ಸೃಷ್ಟಿಸಿದೆ. ಪತ್ನಿ ಜೀವ ತೆಗೆಯುವ ಮಟ್ಟಕ್ಕೆ ಹೋಗಿ, ಪತಿ ತನ್ನ ಜೀವವನ್ನು ತಾನೇ ಕಳೆದುಕೊಳ್ಳುವ ಮೂಲಕ ಅಂತ್ಯವಾಗಿದೆ.
ತನಿಖೆಗಳು ಹೇಳುವ ಪ್ರಕಾರ ಗಂಡನ ಮೊಬೈಲ್ಗೆ ಸುಮಾರು ರಾತ್ರಿ ಸುಮಾರು 11.45ಕ್ಕೆ ಮೆಸೇಜ್ ಬಂದಿದೆ. ಈ ವೇಳೆ ಇಬ್ಬರ ನಡುವೆ ದೊಡ್ಡ ವಾಗ್ವಾದವೇ ಶುರುವಾಗಿದೆ. ಪತಿಯ ಹಳೆಯ ಸಂಬಂಧದ ವಿಚಾರವಾಗಿ ಮಾತನಾಡಿದ್ದಾಳೆ. ಕೊನೆಗೆ ಕೋಪಗೊಂಡ ಪತಿ ಪತ್ನಿಯ ಕತ್ತು ಹಿಸುಕಿ ಅವಳ ಜೀವ ತೆಗೆದಿದ್ದಾನೆ. ನಂತರ ತಾನು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾನೆ.
ಬೆಳಗ್ಗೆ ತುಂಬಾ ಹೊತ್ತಾದರೂ ಜೋಡಿಯಲ್ಲಿ ಯಾರೊಬ್ಬರು ಬಾಗಿಲು ತೆಗೆದು ಆಚೆ ಬಾರದ ಕಾರಣ, ಸಂಶಯ ಬಂದು ಕುಟುಂಬದವರು ಬಾಗಿಲನ್ನು ಬಡಿದಿದ್ದಾರೆ. ಆಗಲು ಪ್ರತಿಕ್ರಿಯೆ ಬರದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿದಾಗ ಶಿವಾನಿ ಜೀವ ಕಳೆದುಕೊಂಡು ನೆಲದ ಮೇಲೆ ಬಿದ್ದಿದ್ದರೆ ಪ್ರದೀಪ ಸೀಲಿಂಗ್ ಫ್ಯಾನ್ನಲ್ಲಿ ನೇತಾಡುತ್ತಿದ್ದ. ಕೂಡಲೇ ಕುಟುಂಬದವರು ಪೊಲೀಸರಿಗೆ ಕರೆ ಮಾಡಿ ಸುದ್ದಿ ಮುಟ್ಟಿಟಸಿದ್ದಾರೆ.
ಸಿಟಿ ಸಿಒ ಶೈಲೇಂದ್ರ ಕುಮಾರ್ ಹೇಳುವ ಪ್ರಕಾರ ಪ್ರದೀಪ್ಗೆ ತನ್ನ ಪತ್ನಿಗೆ ತನ್ನ ಹಳೆಯ ಸಂಬಂಧದ ಬಗ್ಗೆ ಏನು ಅನಿಸಿಕೆ ಇರಬಹುದು ಎಂದು ತಿಳಿದುಕೊಳ್ಳುವ ಕುತೂಹಲವಿತ್ತಂತೆ. ಹೀಗಾಗಿಯೇ ತನ್ನ ನಂಬರ್ನಿಂದ ತಾನೇ ಮೆಸೇಜ್ ಮಾಡಿಕೊಂಡಿದ್ದಾನೆ. ಹೀಗೆ ಶುರುವಾದ ವಾದ ಜೀವಕಳೆದುಕೊಳ್ಳುವ ಹಿಂಸಾತ್ಮಕ ಮಟ್ಟಕ್ಕೆ ಹೋಗಿದೆ ಎಂದು ಹೇಳಿದ್ದಾರೆ.