

ಶಿವಮೊಗ್ಗ: ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮತ್ತು ಕಾಂಗ್ರೆಸ್ ಮುಖಂಡ, ಸೇವಾದಳ ಜಿಲ್ಲಾಧ್ಯಕ್ಷ ವೈ.ಎಚ್.ನಾಗರಾಜ್ ಕುಟುಂಬಗಳ ನಡುವೆ ಸಂಬಂಧ ಬೆಳೆದಿದೆ.
ಆಯನೂರು ಮಂಜುನಾಥ್ ಪುತ್ರ ಸಂತೋಷ್ ಜತೆ ನಾಗರಾಜ್ ಪುತ್ರಿ ಎನ್.ಲಾವಣ್ಯರ ವಿವಾಹ ನಿಶ್ಚಿತಾರ್ಥ ಗುರುವಾರ ಶಿವಮೊಗ್ಗದಲ್ಲಿ ನೆರವೇರಿತು. ಎರಡೂ ಕುಟುಂಬಗಳ ಸ್ನೇಹಿತರು-ಬಂಧುಗಳು ಪಾಲ್ಗೊಂಡಿದ್ದರು.
ಕಳೆದ ವರ್ಷ ಆಯನೂರು ಮಂಜುನಾಥ್ ಅವರು ಪುತ್ರಿಯ ವಿವಾಹವನ್ನು ಸಾಮೂಹಿಕ ವಿವಾಹದಲ್ಲಿ ನೆರವೇರಿಸಿದ್ದರು. ಪುತ್ರ ಸಂತೋಷ್ ವಿವಾಹವನ್ನೂ 2021ರ ಮಾರ್ಚ್ ವೇಳೆ ಸಾಮೂಹಿಕ ವಿವಾಹದಲ್ಲಿಯೇ ನೆರವೇರಿಸಲು ನಿರ್ಧರಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.