ಆ.6ರಂದು ವಿಪ್ರ ನೌಕರರ ಸಂಘದಿಂದ ಪುರಸ್ಕಾರ, ಸನ್ಮಾನ

H.s.Keshwamurthy
ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ.ಕೇಶವಮೂರ್ತಿ.
Published on

ಶಿವಮೊಗ್ಗ: ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ, ಸುವರ್ಣ ದಾಂಪತ್ಯ ಸನ್ಮಾನ ಹಾಗೂ ಸಂಘದ ಹಿರಿಯ ನಿರ್ದೇಶಕರಿಗೆ ಅಭಿನಂದನಾ ಸಮಾರಂಭವನ್ನು ಆ.6ರಂದು ಬೆಳಗ್ಗೆ 9.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ.ಕೇಶವಮೂರ್ತಿ ತಿಳಿಸಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 40 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 75 ವಿದ್ಯಾರ್ಥಿಗಳಿಗೆ ಸುಮಾರು 7.50 ಲಕ್ಷ ರೂ. ವಿದ್ಯಾನಿಧಿ ವಿತರಿಸಲಾಗುವುದು. ಶತಾಯುಷಿ ಎಚ್.ಎಸ್.ವೆಂಕಮ್ಮ ಹಾಗೂ ಸುವರ್ಣ ದಾಂಪತ್ಯ ಪೂರೈಸಿದ 7 ದಂಪತಿಗೆ ಸನ್ಮಾನಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಿರಿಯ ನಿರ್ದೇಶಕರಾದ ಉಮಾ ಪಾಟೀಲ, ಪ್ರಹ್ಲಾದ ಪಾಟೀಲ, ಡಾ. ಎನ್.ಆರ್.ಮಂಜುಳಾ, ಸರ್ಕಾರಿ ಸೇವೆಯಿಂದ ನಿವೃತ್ತರಾದ ಸಂಘದ ನಿರ್ದೇಶಕ ಹರೀಶ್ ಕಾರ್ಣಿಕ್, ವಿಪ್ರಶ್ರೀ ಪುರಸ್ಕೃತ ಜಿ.ಎಸ್.ಅನಂತ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ರಾಮಾಚಾರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅವರನ್ನು ಅಭಿನಂದಿಸಲಾಗುವುದು ಎಂದರು.
ಬೆಳಗ್ಗೆ 9.30ಕ್ಕೆ ಹಿರಿಯ ಪತ್ರಕರ್ತರ ಎಸ್.ಸೂರ್ಯಪ್ರಕಾಶ್ ಪಂಡಿತ್ ಅವರು ದಿಕ್ಸೂಚಿ ನುಡಿಗಳನ್ನಾಡುವರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಮಾರಂಭ ಉದ್ಘಾಟಿಸುವರು. ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಸಂಘದ ಮುಖ್ಯ ಸಲಹೆಗಾರ ಮ.ಸ.ನಂಜುಂಡಸ್ವಾಮಿ, ಗೌರವಾಧ್ಯಕ್ಷ ಆರ್.ಅಚ್ಯುತರಾವ್ ಭಾಗವಹಿಸುವರು ಎಂದರು.
ಸಂಘದ ಪದಾಧಿಕಾರಿಗಳಾದ ಆರ್.ಅಚ್ಯುತರಾವ್, ಎಚ್.ಎನ್.ಛಾಯಾಪತಿ. ಯು.ಎಸ್.ಕೇಶವಮೂರ್ತಿ, ರವಿಕುಮಾರ್, ಕೆ.ಎನ್.ವಿಶ್ವನಾಥ್, ಎಲ್.ಎನ್.ಪ್ರಸಾದ್, ವಸುಂಧರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net