

ಹುಣಸೂರು: ಇಂಡಿಯನ್ ಸೊಸೈಟಿ ಆಫ್ ಟೊಬ್ಯಾಕೋ ಸೈನ್ಸ್, ಐಸಿಎಆರ್ ಮತ್ತು ಸಿಟಿಆರ್‌ಐ ಸಹಯೋಗದಲ್ಲಿ ಕೊಡಮಾಡುವ 2020ನೇ ಸಾಲಿನ ಫೆಲೋ ಆಫ್ ಇಂಡಿಯನ್ ಸೊಸೈಟಿ ಆಫ್ ಟೊಬ್ಯಾಕೊ ಸೈನ್ಸ್(ಎಫ್‌ಐಎಸ್‌ಟಿಎಸ್-2020)ಗೆ ಹುಣಸೂರಿನ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ(ಸಿಟಿಆರ್‌ಐ) ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಭಾಜನರಾಗಿದ್ದಾರೆ.
ಮೇ 1ರಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಆಯೋಜನೆಗೊಂಡಿರುವ 77ನೇ ಐಸಿಎಆರ್-ಸಿಟಿಆರ್‌ಐ ಫೌಂಡೇಷನ್ ಡೇ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.