‘ಕೆಸರುಗದ್ದೆ’ ಕೆಳಗಳ್ಳೀ ಪಟ್ಟೆ ತಂಡಕ್ಕೆ ಪ್ರಶಸ್ತಿ

oplus_0
ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪುರುಷರ ಹಗ್ಗಾಜಗ್ಗಾಟದ ಕ್ಷಣ.
Published on

ಸೋಮವಾರಪೇಟೆ: ಕಿರಗಂದೂರು ಗ್ರಾಮದ ನಾಗರಾಜು ಅವರ ಗದ್ದೆಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದ ಪುರುಷರ ವಾಲಿಬಾಲ್ ಪ್ರಶಸ್ತಿಯನ್ನು ಕೆಳಗಳ್ಳಿ ಪಟ್ಟೆ ತಂಡ ಪ್ರಥಮ ಸ್ಥಾನ ಪಡೆಯಿತು. ನಂದಿ ಸಂಸ್ಥೆ ದ್ವಿತೀಯ ಸ್ಥಾನ ಪಡೆಯಿತು.

ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಕೆಳಗಳ್ಳಿ ಪಟ್ಟೆ ತಂಡ ಪ್ರಥಮ, ಸಿಂಗೂರು ಪಟ್ಟೆ ತಂಡ ದ್ವಿತೀಯ ಸ್ಥಾನ, ಪುರುಷರ ಹಗ್ಗ ಜಗ್ಗಾಟದಲ್ಲಿ ಕೆಳಗಳ್ಳಿ ಪಟ್ಟೆ ಪ್ರಥಮ, ಮಹಿಳೆಯರ ಹಗ್ಗಾ ಜಗ್ಗಾಟದಲ್ಲಿ ಸಿಂಗೂರು ಪಟ್ಟೆ ಪ್ರಥಮ ಸ್ಥಾನ ಪಡೆಯಿತು.

ಶಾಸಕ ಡಾ.ಮಂತರ್‌ಗೌಡ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕೆಸರುಗದ್ದೆಯಲ್ಲಿ ನಡೆಯುವ ಗ್ರಾಮೀಣ ಕ್ರೀಡಾಕೂಟ ಒಕ್ಕಲುತನದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಅನೇಕ ಕಾರಣಗಳಿಂದ ಭತ್ತ ಕೃಷಿಯನ್ನು ರೈತರು ಕೈ ಬಿಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗದ್ದೆಗಳು ಕಣ್ಮರೆಯಾಗುತ್ತಿವೆ. ರೈತರು ಭತ್ತದ ಗದ್ದೆಗಳನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಕಿರಗಂದೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಸಿ.ಎಸ್.ಚಿದಾನಂದ, ಕಾರ್ಯದರ್ಶಿ ಬಿ.ಬಿ.ರಶಿನ್ ಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net