ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಹೈದರಾಬಾದಿನ ಜಿಎಂಸಿ ಬಾಲಯೋಗಿ ಇಂಡೋರ್ ಸ್ಟೇಡಿಯಂನಲ್ಲಿ ಆ.16 ಮತ್ತು 17ರಂದು ಹಮ್ಮಿಕೊಂಡಿದ್ದ ಯೂಸಿಮಾಸ್ ರಾಷ್ಟ್ರೀಯ ಮಟ್ಟದ ಮಾನಸಿಕ ಅಂಕ ಗಣಿತ ಸ್ಪರ್ಧೆಯಲ್ಲಿ ಚಿಂತಾಮಣಿಯ ಯೂಸಿಮಾಸ್ ಅಬಾಕಸ್ ಕೇಂದ್ರದ ಮಕ್ಕಳು ವಿವಿಧ ಶ್ರೇಣಿಗಳಲ್ಲಿ ಭಾಗವಹಿಸಿ 4 ರನ್ನರ್ಅಪ್, 5 ಮೆರಿಟ್ ಮತ್ತು 13 ಸಮಾಧಾನಕರ ಬಹುಮಾನಗಳನ್ನು ಬಾಚಿಕೊಂಡು ಕೀರ್ತಿ ತಂದಿದ್ದಾರೆ.
ವಿವಿಧ ರಾಜ್ಯಗಳಿಂದ 6000 ವಿದ್ಯಾರ್ಥಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಕೂಡುವ, ಕಳೆಯುವ, ಗುಣಾಕಾರ ಮತ್ತು ಭಾಗಾಕಾರದಂತಹ ಕಠಿಣವಾದ 200 ಲೆಕ್ಕಗಳನ್ನು ಕೇವಲ 8 ನಿಮಿಷಗಳಲ್ಲಿ ಬಿಡಿಸುವ ಸ್ಪರ್ಧೆ ಇದ್ದಾಗಿತ್ತು.
ಪ್ರಶಸ್ತಿ ವಿಜೇತರು ಎಂ. ಪುರ್ವಿ-ರನ್ನರ್ಅಪ್ 1, ಕೆ.ಆರ್.ಯುಕ್ತ- ರನ್ನರ್ಅಪ್ 3, ಭವತೇಜ್ -ರನ್ನರ್ಅಪ್ 3, ಎಂ.ವಿಭಾ- ರನ್ನರ್ಅಪ್ 5 ಮತ್ತು
ಎ.ಎನ್.ವರುಣ್ರೆಡ್ಡಿ, ರುತ್ವಿಕ್, ಚತುರ್, ಎಂ.ಭುವಿಕ್, ಋತ್ವಿಕ್ತಡಿಬೋಯಿನ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ. ಚಿಂತಾಮಣಿ ಕೇಂದ್ರದ ಮುಖ್ಯಸ್ಥ ಟಿ.ಎ.ರಮೇಶ್, ಮುಖ್ಯ ತರಬೇತುದಾರ ಲಕ್ಷಿ$್ಮ ರಮೇಶ್ ಮಕ್ಕಳ
ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.