VIDEO|ಶರಣ್​ ಹುಟ್ಟು ಹಬ್ಬದ ಅಂಗವಾಗಿ ಅವತಾರ್​ ಪುರುಷ ಚಿತ್ರದ ಟ್ರೈಲರ್ ಬಿಡುಗಡೆ

avatarpurusha -feb 06 2020
Published on

ಬೆಂಗಳೂರು: ಸ್ಯಾಂಡಲ್ ವುಡ್ ಅಧ್ಯಕ್ಷ ನಟ ಶರಣ್​​​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಶರಣ್​ ಅಭಿನಯದ ಅವತಾರ್​ ಪುರುಷ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಅವರ ಜನ್ಮದಿನದ ಸಂಭ್ರಮವನ್ನು ಇನ್ನಷ್ಟು ಅಧಿಕಗೊಳಿಸಿದೆ.

ಚಿತ್ರದಲ್ಲಿ ಶರಣ್​ ಜತೆ ನಾಯಕಿಯಾಗಿ ಆಶಿಕಾ ರಂಗನಾಥ್​ ನಟಿಸಿದ್ದಾರೆ. ಸಾಯಿ ಕುಮಾರ್​, ಸುಧಾರಾಣಿ ಅವರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಚಿತ್ರವನ್ನು ಸಿಂಪಲ್​ ಸುನಿ ನಿರ್ದೇಶಿಸಿದ್ದಾರೆ. ಚರಣ್​ ರಾಜ್​ ಅವರ ಸಂಗೀತ ಚಿತ್ರಕ್ಕೆ ಇದೆ. ಪುಷ್ಕರ ಮಲ್ಲಿಕಾರ್ಜುನ ಚಿತ್ರಕ್ಕೆ ಹಣ ಹೂಡಿದ್ದಾರೆ.

ಹಾಸ್ಯದ ಜತೆಗೆ ನವಿರಾದ ಪಣ್ರಯ ಕತೆಯನ್ನು ಚಿತ್ರ ಹೊಂದಿದೆ. ಶರಣ್​ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net