

|ವಿಲಾಸ ಮೇಲಗಿರಿ
ಕೆಲ ವರ್ಷಗಳ ಹಿಂದೆ ವಜ್ರಾಭರ ಎಂದರೆ ಶ್ರೀಮಂತರ ಸ್ವತ್ತು ಎಂಬ ಮಾತಿತ್ತು. ಆದರೀಗ, ಕಾಲ ಬದಲಾಗಿದೆ. ವಜ್ರಾಭರಣಗಳು ಮಧ್ಯಮ ಮತ್ತು ನವ ಮಧ್ಯಮ ವರ್ಗದ ಆಕರ್ಷಣೆಯ ಆಭರಣಗಳಾಗಿವೆ. ಮಹಿಳೆಯರು ಕೂಡ ಆರ್ಥಿಕವಾಗಿ ಸಬಲರು, ಸ್ವತಂತ್ರರು, ಬೇಕು-ಬೇಡಗಳ ನಿರ್ಣಾಯಕರೂ ಆಗುತ್ತಿರುವುದರಿಂದ ವಜ್ರ ಖರೀದಿಗೆ ಖದರು ಬಂದಿದೆ.
ವಿಶ್ವದ ಪ್ರಮುಖ ವಜ್ರ ಕಂಪನಿ ಡಿ ಬೀರ್ಸ್ ಗ್ರೂಪ್ ಮುಂಬಯಿಯಲ್ಲಿ 75ನೇ ವಾರ್ಷಿಕ ಸ್ಮರಣೆ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ ತನ್ನೆಲ್ಲ ಅಧಿಕೃತ ಪಾಲುದಾರರು, ಗುಣಮಟ್ಟದ ವಜ್ರ ಉತ್ಪಾದಕರು ಮತ್ತು ದೇಶಾದ್ಯಂತದ ತಯಾರಕರು ಭಾಗವಹಿಸಿದ್ದರು. ಕಂಪನಿಯ ಐತಿಹಾಸಿಕ ಟ್ಯಾಗ್ಲೈನ್ ‘ಎ ಡೈಮಂಡ್ ಈಸ್ ಫಾರೆವರ್’ಈ ವರ್ಷದ ವಿಷಯವಾಗಿತ್ತು.
ಡಿ ಬೀರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಚಿನ್ ಜೈನ್ ಮಾತನಾಡಿ, ಕೋವಿಡ್ ಲಾಕ್ಡೌನ್ನಿಂದ ವಜ್ರ ವ್ಯಾಪಾರ ಸಂಕಷ್ಟಕ್ಕೆ ಸಿಲುಕಿತ್ತು. ಜತೆಗೆ ಯೂಕ್ರೇನ್-ರಷ್ಯಾ ನಡುವಿನ ಯುದ್ಧವೂ ವ್ಯಾಪಾರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಇತ್ತೀಚಿಗೆ ಚೇತರಿಕೆ ಕಾಣುತ್ತಿದ್ದು, ಖರೀದಿದಾರರಲ್ಲಿ ಉತ್ಸಾಹ ಹೆಚ್ಚುತ್ತಿದೆ ಎಂದರು.
ಭಾರತದ 62 ನಗರಗಳಲ್ಲಿ ನಮ್ಮ ಉತ್ಪನ್ನಗಳ ಮಾರಾಟವಿದ್ದು, 14 ಎಕ್ಸ್್ಸ್ಲೂಸಿವ್ ಮಳಿಗೆಗಳಿವೆ. ಮುಂಬರುವ ದಿನಗಳಲ್ಲಿ ಈ ಮಳಿಗೆಗಳನ್ನು 30ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಪ್ರಸ್ತುತ 6 ಬಿಲಿಯನ್ ಡಾಲರ್ ವಹಿವಾಟು ನಡೆಯುತ್ತಿದೆ. 2030ರ ವೇಳೆಗೆ ಇದು 17 ಬಿಲಿಯನ್ ಡಾಲರ್ಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಸಚಿನ್ ಹೇಳಿದರು.
ಅಪರೂಪದ ಅನುಭೂತಿ: ಫಾರ್ ಎವರ್ವಾರ್ಕ್ ‘ಅವಂತಿ’ ಸಂಗ್ರಹದಲ್ಲಿ ಹೊಸ ವಿನ್ಯಾಸಗಳನ್ನು ಬಿಡುಗಡೆ ಮಾಡುವುದಾಗಿ ಕಾರ್ಯಕ್ರಮದಲ್ಲಿ ಘೊಷಿಸಲಾಯಿತು. ಹೊಸ ಉಂಗುರಗಳು, ಪೆಂಡೆಂಟ್ಗಳು ಮತ್ತು ಕಿವಿಯೋಲೆಗಳು ಸುಂದರ, ಅಪರೂಪದ ಅನುಭೂತಿ ನೀಡಿದವು. ಡಿ ಬೀರ್ಸ್ ಫಾರೆವರ್ ಮಾರ್ಕ್ ವಜ್ರವನ್ನು ಹೊಂದಿದ್ದು, 18ಕೆ ಹಳದಿ, ಬಿಳಿ ಅಥವಾ ಗುಲಾಬಿ ಚಿನ್ನದಲ್ಲಿ ಹೊಂದಿಸಲಾಗಿತ್ತು. ಇಂದಿನ ಗ್ರಾಹಕರ ಆಸೆ, ಅಭಿಲಾಷೆ, ವಿಶ್ವಾಸವನ್ನು ಪ್ರೇರೇಪಿಸುವ ಬ್ರಾ್ಯಂಡ್ಗಳನ್ನು ಡಿ ಬೀರ್ಸ್ ಗ್ರೂಪ್ ಪ್ರತಿಬಿಂಬಿಸಿತು. ಡಿ ಬೀರ್ಸ್ ಫೋರಂ 16 ತಯಾರಕರಿಂದ 3000ಕ್ಕೂ ಹೆಚ್ಚು ವಿನ್ಯಾಸಗಳನ್ನು ಪ್ರದರ್ಶಿಸಲಾಯಿತು. ಮೂರು ದಿನಗಳ ಮೇಳದಲ್ಲಿ ಪ್ರತಿದಿನ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ಭರ್ಜರಿ ಬೇಡಿಕೆ: ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಡಿ ಬೀರ್ಸ್ ಉತ್ಪನ್ನಗಳಿಗೆ ವಿಶೇಷ ಬೇಡಿಕೆ ಇದೆ. ಗುಣಮಟ್ಟ, ಅತ್ಯಾಕ ರ್ಷಕ ಮತ್ತು ಹೊಸ ಹೊಸ ವಿನ್ಯಾಸಗಳು ಯುವ ಪೀಳಿಗೆ ಮತ್ತು ಮಹಿಳೆಯರನ್ನು ಆಕರ್ಷಿಸುತ್ತಿವೆ.
ವಜ್ರಾಭರಣ ವ್ಯಾಪಾರ ಜಿಡಿಪಿಗೆ ಶೇ.7.5 ಕೊಡುಗೆ ನೀಡುತ್ತಿದೆ. ಈ ಕ್ಷೇತ್ರದಲ್ಲಿ 5.5 ಮಿಲಿಯನ್ ಜನರು ಕೆಲಸ ಮಾಡುತ್ತಿದ್ದಾರೆ. ಸುಸ್ಥಿರ ವಜ್ರ ವ್ಯಾಪಾರಕ್ಕೆ ಸಂಸ್ಥೆ ಆದ್ಯತೆ ನೀಡಿದೆ.
| ಡೇವಿಡ್ ಪ್ರೇಜರ್ ಡಿ ಬೀರ್ಸ್ ಚೀಫ್ ಬ್ರಾ್ಯಂಡ್ ಆಫೀಸರ್