ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಶ್ರೇಣಿಯ ಪರ್ವತದಲ್ಲಿ ಹಿಮಪಾತ; ಇಬ್ಬರು ಸೈನಿಕರು ನಾಪತ್ತೆ, ಶೋಧಕಾರ್ಯ| Soldiers

ವಿಜಯವಾಣಿ (10)
Published on

Soldiers: ಜಮ್ಮು-ಕಾಶ್ಮೀರದ ಕಿಶ್ತ್ವಾರದ ಶ್ರೇಣಿಯ ಪರ್ವತ ಪ್ರದೇಶದಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ಇಬ್ಬರು ಸೈನಿಕರು ನಾಪತ್ತೆಯಾಗಿದ್ದಾರೆ, ಅವರಿಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಬುಧವಾರ(ಅ. 08) ಸೇನೆ ತಿಳಿಸಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಚಿನಾರ್ ಕಾರ್ಪ್ಸ್‌, ಅಕ್ಟೋಬರ್ 6 ಮತ್ತು 7ರ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ, ಕಾರ್ಯಾಚರಣೆಯ ತಂಡವು ಪರ್ವತ ಪ್ರದೇಶದಲ್ಲಿ ವೈಟ್‌ಔಟ್ ಮತ್ತು ಭಾರೀ ಹಿಮಪಾತ ಸೇರಿದಂತೆ ತೀವ್ರ ಹವಾಮಾನವನ್ನು ಎದುರಿಸಿತು. ಅಂದಿನಿಂದ, ಇಬ್ಬರು ಸೈನಿಕರು ನಮ್ಮ ಸಂವಹನದಿಂದ ದೂರವಾಗಿದ್ದಾರೆ. ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net