ಯೂಟ್ಯೂಬ್​ನಲ್ಲಿ ಆರ್ಥಿಕ ಸಲಹೆಗಳನ್ನು ನೀಡುತ್ತಿದ್ದಾರೆ ಈ ಆಟೋ ಚಾಲಕ!

youtuber driver
Published on

ಬೆಂಗಳೂರು: ದಿನನಿತ್ಯದ ಕೆಲಸಗಳನ್ನು ಮಾಡುವಾಗ ಬಹಳಷ್ಟು ಜನರು ಅವರು ಉತ್ಸಾಹದಿಂದ ಸೈಡ್ ಬಿಸಿನೆಸ್​ನಲ್ಲಿ ತೊಡಗುತ್ತಾರೆ. ಅದೇ ರೀತಿ ಈ ಆಟೋ ಚಾಲಕ, ಉಳಿದ ಸಮಯದಲ್ಲಿ ಯೂಟ್ಯೂಬ್​ನಲ್ಲಿ ಆರ್ಥಿಕತೆ ಬಗ್ಗೆ ವಿಡಿಯೋ ಮಾಡುತ್ತಿದ್ದಾರೆ!

ಈ ಬಗ್ಗೆ ವ್ಯಕ್ತಿಯೊಬ್ಬರು ಆ ಆಟೋ ಚಾಲಕನ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಗಮನಿಸಿದ್ದು ಈ ಬಗ್ಗೆ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿ ಜನರ ಗಮನ ಸೆಳೆದಿದ್ದಾರೆ. “ಪೀಕ್ ಬೆಂಗಳೂರು” ಎನ್ನುವ ಖಾತೆ ಈ ಕ್ಷಣವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

ಸುಶಾಂತ್ ಕೋಶಿ ಎಂಬ ವ್ಯಕ್ತಿ, ಚಾಲಕ ಜನಾರ್ದನ್ ತನ್ನ ಯೂಟ್ಯೂಬ್ ಚಾನೆಲ್ ಗೋಲ್ಡ್ ಜನಾರ್ದನ್ ಇನ್ವೆಸ್ಟರ್ ಜಾಹೀರಾತಿಗಾಗಿ ತನ್ನ ಆಟೋರಿಕ್ಷಾದಲ್ಲಿ ಹಾಕಿದ್ದ ಬ್ಯಾನರ್‌ನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದು 800ಕ್ಕೂ ಹೆಚ್ಚು ಸಬ್​ಸ್ಕ್ರೈಬರ್ಸ್​ ಹೊಂದಿದ್ದು "ನೋಟ್ ಪ್ರಿಂಟ್​ ಮಾಡುವುದು ದೇಶಕ್ಕೆ ಒಳ್ಳೆಯದಲ್ಲ", "ಮಾರುತಿ 800 ಕಾರ್, ಮಾರುತಿ ಷೇರುಗಳು" ಮತ್ತು "ನಿಮ್ಮ ಮೊದಲ ಸ್ಟಾಕ್ ಅನ್ನು ಹೇಗೆ ಆರಿಸುವುದು" ಮುಂತಾದ ವಿಷಯಗಳ ಕುರಿತು 100 ಕ್ಕೂ ಹೆಚ್ಚು ವೀಡಿಯೊಗಳನ್ನು ಈ ಯೂಟ್ಯೂಬ್​ ಚ್ಯಾನಲ್​ ಹಂಚಿಕೊಂಡಿದ್ದಾರೆ.

"ನನ್ನ ಆಟೋ ಚಾಲಕ ಇಂದು ಯೂಟ್ಯೂಬ್​ ಚ್ಯಾನಲ್​ ಹೊಂದಿದ್ದು ವೈಯಕ್ತಿಕ ಹಣಕಾಸು ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾನೆ" ಎಂದು ಕೋಶಿ ಬರೆದು ಟ್ವಿಟರ್ ಖಾತೆ ಪೀಕ್ ಬೆಂಗಳೂರು ನಲ್ಲಿ ಪೋಸ್ಟ್​ ಮಾಡಿದ್ದಾರೆ.

"ಕೇಂದ್ರೀಯ ಬ್ಯಾಂಕುಗಳು ಹೆಚ್ಚಿನ ಹಣವನ್ನು ಮುದ್ರಿಸಲು ಏಕೆ ಸಾಧ್ಯವಿಲ್ಲ ಎಂಬುದಕ್ಕೆ ಅವರ ವಿವರಣೆಯು ಸಾಮಾನ್ಯ ಜನರಿಗೂ ಅರ್ಥವಾಗುವಂತಿದ್ದು ನಿಜವಾಗಿಯೂ ಪ್ರಭಾವಶಾಲಿಯಾಗಿದೆ!" ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕೋಶಿ ಅವರು ಆಟೋ ಚಾಲಕ ಜನಾರ್ದನ್​ರ ವೀಡಿಯೊಗಳಿಂದ ಪ್ರಭಾವಿತರಾಗಿದ್ದು “ಆಟೋಡ್ರೈವರ್ ಜನಾರ್ದನ್ ಅವರ ಯೂಟ್ಯೂಬ್ ಚಾನೆಲ್ ಅನ್ನು ನೋಡಿ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಅವರು: 1. ಮಧ್ಯಮ ಸಂಕೀರ್ಣ ಆರ್ಥಿಕ ವಿಷಯಗಳ ಬಗ್ಗೆ ಸಾಮಾನ್ಯರ ಭಾಷೆಯಲ್ಲಿ ವಿವರಿಸಿದ್ದಾರೆ. ಅದಲ್ಲದೇ ಅವರ ವಿಡಿಯೋದಲ್ಲಿ ಗ್ರಾಫ್‌ಗಳು, ಮುಂತಾದ ತಾಂತ್ರಿಕ ಮಾಹಿತಿ ಕೂಡ ಇದೆ. ಇದು ಕೇಸ್ ಸ್ಟಡಿಗೆ ಅರ್ಹವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net