

ಮುಂಬೈ: ಹೊರ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಮಹಿಳೆಯನ್ನು ಆಟೋ ಡ್ರೈವರ್ ಒಬ್ಬ ರೇಪ್ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಅತ್ಯಾಚಾರ ಪ್ರಕರಣ ದಾಖಲಾಗಿ 12 ಗಂಟೆಗಳಲ್ಲೇ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.
ಚತ್ತೀಸಗಢದ ಜಾಶ್ಪುರ ನಿವಾಸಿಯಾಗಿರುವ ಮಹಿಳೆ ಮುಂಬೈನಲ್ಲಿ ಕ್ರಿಸ್ಮಸ್ ಆಚರಿಸುವ ಸಲುವಾಗಿ ಬಂದಿದ್ದರು. ಡಿಸೆಂಬರ್ 26ನೇ ತಾರೀಖಿನಂದು ಪನ್ವೆಲ್ ರೈಲ್ವೆ ನಿಲ್ದಾಣಕ್ಕೆ ತೆರಳಿದ ಮಹಿಳೆ ಅಲ್ಲೊಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿ ಆ ದಿನ ಆತನೊಂದಿಗೆ ಕಳೆದಿದ್ದಾಳೆ. ಮಾರನೇ ದಿನ ಬೆಳಗ್ಗೆ ಆಟೋ ಒಂದನ್ನು ಬುಕ್ ಮಾಡಿ ಅದರಲ್ಲಿ ಗಾಂಧಿ ಗಾರ್ಡೆನ್ಗೆ ಹೊರಟಿದ್ದಾಳೆ.
ಒಂಟಿ ಮಹಿಳೆಯನ್ನು ಆಟೋದಲ್ಲಿ ಹತ್ತಿಸಿಕೊಂಡ ಆಟೋ ಡ್ರೈವರ್ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಈ ವಿಚಾರವಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಮುಂಬೈ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿದಿದ್ದಾರೆ. (ಏಜೆನ್ಸೀಸ್)