ಆಟೋ-ಬೈಕ್ ಡಿಕ್ಕಿಯಾಗಿ ಸವಾರ ಸಾವು

Mudgal Accident
ಶರಣಬಸವ ತಿರುಪತಿ
Published on

ಮುದಗಲ್: ಪಟ್ಟಣದ ನಾಯರ್ ಪೆಟ್ರೋಲ್ ಬಂಕ್ ಬಳಿ ಗುರುವಾರ ಆಟೋ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸವಾರ ಮೃತಪಟ್ಟಿದ್ದಾನೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ತಾವರಗೇರಾದ ಶರಣಬಸವ ತಿರುಪತಿ (25)ಮೃತ ಬೈಕ್ ಸವಾರ.

ಮುದಗಲ್ ಪಟ್ಟಣದ ಮಾವನ ಮನೆಗೆ ಬಂದಿದ್ದ ಶರಣಬಸವ ಗುರುವಾರ ಬೈಕ್‌ನಲ್ಲಿ ತೆರಳುತ್ತಿರುವಾಗ ಅಪಘಾತವಾಗಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಿದರೂ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net