

ನವದೆಹಲಿ: ಬೃಹತ್ ಹಡಗು ಟೈಟಾನಿಕ್ ಮುಳುಗಿದ ಕಥೆ ಯಾರಿಗೆ ಗೊತ್ತಿಲ್ಲ? 2208 ಜನರನ್ನು ಹೊತ್ತು ನ್ಯೂಯಾರ್ಕ್ನತ್ತ ಸಾಗುತ್ತಿದ್ದ ಟೈಟಾನಿಕ್ 1912ರ ಏಪ್ರಿಲ್ 15ರಂದು ಬೃಹತ್ ಹಿಮಗಡ್ಡೆಗೆ ಡಿಕ್ಕಿ ಹೊಡೆದು 700 ಜನ ಮೃತಪಟ್ಟಿದ್ದಲ್ಲದೆ ಹಡಗೂ ಮುಳುಗಿತ್ತು.
ಇತ್ತೀಚೆಗೆ ಪತ್ತೆಯಾದ ಆ ಹಿಮಗಡ್ಡೆಯ ಫೋಟೋ 15 ಸಾವಿರ ಡಾಲರ್ಗೆ ಹರಾಜಾಗಿದೆ. ಟೈಟಾನಿಕ್ ಸಾಗುತ್ತಿದ್ದ ಮಾರ್ಗದಲ್ಲೇ ಎರಡು ದಿನಗಳ ಮೊದಲು ಸಾಗಿದ್ದ ಬೇರೆ ಹಡಗಿನ ಕ್ಯಾಪ್ಟನ್ ಡಬ್ಲ್ಯು. ವುಡ್ ಹಿಮಗಡ್ಡೆಯ ಫೋಟೋ ಸೆರೆಹಿಡಿದಿದ್ದರು.
ನ್ಯೂಯಾರ್ಕ್ ತಲುಪುವುದರೊಳಗೆ ಟೈಟಾನಿಕ್ ಮುಳುಗಿತ್ತು. ಅದೇ ದಾರಿಯಲ್ಲಿ ತಾನು ಕಂಡ ಹಿಮಗಡ್ಡೆಯೇ ದುರಂತಕ್ಕೆ ಕಾರಣ ಎಂದರಿತ ಅವರು; ತಾನು ಸಾಗಿದ ದಾರಿ, ದುರಂತಕ್ಕೆ ಕಾರಣವಾದ ಹಿಮಗಡ್ಡೆಯ ಬಗ್ಗೆ ತಮ್ಮ ಅಜ್ಜನಿಗೆ ಪತ್ರ ಬರೆದು ಫೋಟೋ ಕಳಿಸಿದ್ದರು. ಈಗ ಹರಾಜಿನಲ್ಲಿ ಆ ಪತ್ರ ಹಾಗೂ ಫೋಟೋವನ್ನು ಹೆನ್ರಿ ಆಲಿಡ್ಜ್ ಎಂಬಾತ ಖರೀದಿಸಿದ್ದಾರೆ.