

ಬೆಂಗಳೂರು: ಅಕ್ರಮ ಚಿನ್ನ ಸಂಗ್ರಹದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಅಟ್ಟಿಕಾ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬು ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದರು.
ಬಾಣಸವಾಡಿ ಸರ್ವಿಸ್ ರಸ್ತೆಯಲ್ಲಿರುವ ಮನೆ ಮೇಲೆ ಪೊಲೀಸರು ದಾಳಿ ನಡೆಸಿ, ಶೋಧಿಸಿದರು. ಆದರೆ ಮನೆಯಲ್ಲಿ ಚಿನ್ನ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಬಾಬು ಮನೆಯ ಗೋಡೆಗಳಲ್ಲಿ ರಹಸ್ಯ ಬಾಕ್ಸ್ಗಳನ್ನು ನಿರ್ಮಿಸಿ ಅಕ್ರಮ ಚಿನ್ನ ಸಂಗ್ರಹ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು. ಹೀಗಾಗಿ ಪೊಲೀಸರು ಮನೆ ಹಾಗೂ ವಾಲ್ರೋಬ್ಗಳನ್ನು ಪರಿಶೀಲನೆ ಮಾಡಿದರು. ಸದ್ಯ ಮನೆ ನವೀಕರಣ ನಡೆಯುತ್ತಿದೆ.
ಮನೆ ಮೇಲೆ ದಾಳಿ ನಡೆಸಲು ಸಿಸಿಬಿ ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದಿದ್ದಾರೆ.