

ಬೆಂಗಳೂರು: ಅವೆನ್ಯೂ ರಸ್ತೆಯ ಎರಡು ಚಿನ್ನಾಭರಣ ಮಳಿಗೆಗಳಲ್ಲಿ ದುಷ್ಕರ್ಮಿಗಳು ಕಳವು ಮಾಡಲು ಯತ್ನಿಸಿ ವಿಲರಾಗಿದ್ದಾರೆ.
ಸೆಕ್ಯೂರಿಟಿ ಗಾರ್ಡ್‌ಗಳು ಹಾಗೂ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಕಳವಿನ ಯತ್ನ ವಿಲವಾಗಿದೆ. ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅವೆನ್ಯೂ ರಸ್ತೆಯ ಎರಡು ಚಿನ್ನಾಭರಣ ಮಳಿಗೆಗಳ ಮಾಲೀಕರು ವಹಿವಾಟು ಮುಗಿದ ನಂತರ ಮಳಿಗೆಗಳಿಗೆ ಶುಕ್ರವಾರ ರಾತ್ರಿ ಬೀಗ ಹಾಕಿ ಮನೆಗೆ ಹೋಗಿದ್ದರು. ಶನಿವಾರ ಬೆಳಗಿನ ಜಾವ ೩ ಗಂಟೆ ಸುಮಾರಿಗೆ ಮಳಿಗೆಗಳ ಬಳಿ ಬಂದಿರುವ ಕಳ್ಳರು ಶೆಟರ್‌ಗಳ ಬೀಗ ಮುರಿದು ಒಳ ನುಗ್ಗಲು ಯತ್ನಿಸಿದ್ದಾರೆ. ಕಳ್ಳರು ಬೀಗ ಒಡೆಯುವ ಶಬ್ಧ ಕೇಳಿ ಎಚ್ಚರಗೊಂಡ ಅಕ್ಕಪಕ್ಕದ ಅಂಗಡಿಗಳ ಸೆಕ್ಯೂರಿಟಿ ಗಾರ್ಡ್‌ಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಹೊಯ್ಸಳ ವಾಹನದಲ್ಲಿ ಅವೆನ್ಯೂ ರಸ್ತೆಗೆ ಹೋಗಿದ್ದಾರೆ. ಹೊಯ್ಸಳ ವಾಹನದ ಸೈರನ್ ಶಬ್ಧ ಕೇಳಿದ ಕಳ್ಳರು ಗಾಬರಿ ಬಿದ್ದು ಸ್ಥಳದಿಂದ ಪರಾರಿಯಾಗಿದ್ದಾರೆ.
ಮುಸುಕುಧಾರಿಗಳಾಗಿದ್ದ ನಾಲ್ಕೈದು ಮಂದಿ ಕಳ್ಳರು, ಕಳವಿಗೆ ಯತ್ನಿಸಿರುವ ಮಳಿಗೆಗಳ ಮುಂಭಾಗದ ಸಿ.ಸಿ. ಕ್ಯಾಮರಾಗಳ ವಿದ್ಯುತ್ ಸಂಪರ್ಕದ ವೈಯರ್‌ಗಳನ್ನು ಕತ್ತರಿಸಿದ್ದಾರೆ. ಆದರೆ, ಅಕ್ಕಪಕ್ಕದ ಮಳಿಗೆಗಳ ಸಿ.ಸಿ.ಕ್ಯಾಮರಾಗಳಲ್ಲಿ ಅವರ ದೃಶ್ಯ ಸೆರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.