ಮರ್ಯಾದಾಗೇಡು ಹತ್ಯೆ ಯತ್ನಕ್ಕೆ ಗ್ರಾಮಸ್ಥರೇ ಹಾಕಿದರು ಬ್ರೇಕ್....!

crime
Published on

ಮೀರತ್: ಮರ್ಯಾದಾಗೇಡು ಹತ್ಯೆಯ ಪ್ರಯತ್ನದಲ್ಲಿ, ನಗರದಲ್ಲಿ ಮಹಿಳೆಯನ್ನು ಆಕೆಯ ಸಹೋದರ ಮತ್ತು ಸೋದರ ಮಾವ ಹತ್ಯೆ ಮಾಡಲು ಪ್ರಯತ್ನಿಸಿದ ಘಟನೆ ನಡೆದಿದೆ.

ಸೂಕ್ತ ಸಮಯಕ್ಕೆ ಅಲ್ಲಿಗೆ ಬಂದ ಗ್ರಾಮಸ್ಥರು ಆಕೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಿಥೋರ್ ಪ್ರದೇಶದ ಕಾಲುವೆ ಬಳಿ ಇಬ್ಬರು ಪುರುಷರೊಂದಿಗೆ ಮಹಿಳೆ ಇರುವುದು ಕಂಡುಬಂತು. ಮಹಿಳೆಗೆ ಇರಿಯುತ್ತಿರುವುದನ್ನು ನೋಡಿದ ಕೆಲ ಗ್ರಾಮಸ್ಥರು ಆಕೆ ನೋವಿನಿಂದ ಬಳಲುತ್ತಿರುವುದನ್ನು ನೋಡಿ ಹತ್ತಿರಬರುವ ಹೊತ್ತಿಗೆ, ಆರೋಪಿಗಳಿಬ್ಬರೂ ವಾಹನ ಹತ್ತಿ ಪರಾರಿಯಾದರು.

ಮಹಿಳೆಗೆ ಇರಿದಿರುವುದು ಮುಖಕ್ಕೆ ಕತ್ತರಿಯಿಂದ ಕತ್ತರಿಸಿರುವುದು ಕಂಡುಬಂದಿದೆ.

ಕೊಲೆಯ ಯತ್ನಕ್ಕೆ ಕಾರಣವೇನು?: ಅವಳು ಹಾಪುರದ ನಿವಾಸಿ. ಅದೇ ಊರಿನ ವ್ಯಕ್ತಿಯನ್ನು ಪ್ರೀತಿಸುತ್ತಿದ್ದು ಆತ ಬೇರೆ ಜಾತಿಯವನಾಗಿದ್ದುದರಿಂದ ಅವರಿಬ್ಬರ ಸಂಬಂಧಕ್ಕೆ ಆಕೆಯ ಕುಟುಂಬದವರು ಆಕ್ಷೇಪಿಸುತ್ತಿರುವುದಾಗಿ ಆಕೆ ತಿಳಿಸಿದ್ದಾಳೆ.

ಸೋಮವಾರ, ಆಕೆಯ ಸಹೋದರ ಮತ್ತು ಸೋದರ ಮಾವ ಆಕೆಯ ಪ್ರೇಮಿಯನ್ನು ಭೇಟಿಯಾಗುವುದಾಗಿ ಆಮಿಷವೊಡ್ಡಿ ಅವಳನ್ನು ಕಿಥೋರ್ ಪ್ರದೇಶದ ಕಾಲುವೆಗೆ ಕರೆದೊಯ್ದರು. ಅವರು ಅವಳ ಮುಖವನ್ನು ವಿರೂಪಗೊಳಿಸಲು ಬಯಸಿದ್ದರು ಆದರೆ ಗ್ರಾಮಸ್ಥರು ಸರಿಯಾದ ಸಮಯಕ್ಕೆ ಅಲ್ಲಿ ಬಂದ ಕಾರಣ ಅವರ ಯತ್ನ ವಿಫಲವಾಯಿತು.

ಆಕೆಯನ್ನು ಆ ಗೆಳೆಯನಿಂದ ಬೇರ್ಪಡಿಸಲು ಆಕೆಗೆ ತನ್ನ ಚಿಕ್ಕಮ್ಮನೊಂದಿಗೆ ಮೀರತ್‌ನಲ್ಲಿ ವಾಸಿಸಲು ಕುಟುಂಬದವರು ಒತ್ತಾಯಿಸಿದ್ದರು ಎಂದು ಅವಳು ಪೊಲೀಸರಿಗೆ ತಿಳಿಸಿದ್ದಾಳೆ.

ಮಹಿಳೆ ರಸ್ತೆಯಲ್ಲಿ ಮಲಗಿರುವ ದೃಶ್ಯಾವಳಿ ಇರುವ ಮೊಬೈಲ್ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಅವಳ ಮುಖದ ಮೇಲಿರುವ ಕತ್ತರಿಸಿದ ಗುರುತು ಆಕೆಗೆ ದೌರ್ಜನ್ಯವೆಸಗಿದ್ದನ್ನು ಸಾಬೀತುಪಡಿಸುತ್ತದೆ, ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಗ್ರಾಮಸ್ಥರು ಈ ಮೊಬೈಲ್ ವಿಡಿಯೋ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಆಕೆ ಸದ್ಯ ಮೀರತ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಎರಡು ತಂಡಗಳನ್ನು ಹಾಪುರಕ್ಕೆ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net