ನಗರಸಭೆ ಜಮೀನು ಕಬಳಿಸಲು ಯತ್ನ

cmc
ಕೋಲಾರ ತಾಲೂಕು ಖಾದ್ರಿಪುರ ಸಮೀಪದ ನಗರಸಭೆ ಜಾಗವನ್ನು ಖಾಸಗಿಯವರು ಕಬಳಿಕೆಗೆ ಯತ್ನಿಸಿದ್ದು, ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ನವೀನ್​ ಚಂದ್ರ, ಲಕ್ಷಿ$್ಮದೇವಮ್ಮ, ವೇಣು, ಗಂಗಾಧರ್​, ಜಗದೀಶ್​ ಇದ್ದರು.
Published on

ಕೋಲಾರ: ನಗರ ಹೊರವಲಯದ ಖಾದ್ರಿಪುರ ಗ್ರಾಮ ಸಮೀಪದ ನಗರಸಭೆಯ ಜಮೀನಿನ್ನು ಖಾಸಗಿಯವರು ಸ್ವಾಧಿನಪಡಿಸಿಕೊಳ್ಳಲು ಯತ್ನಸಿದ್ದು, ಗುರುವಾರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಿದರು.

ಖಾದ್ರಿಪುರ ಸಮೀಪದ ಕೋಲಾರ ನಗರಸಭೆಗೆ ಕ್ರಯ ಆಗಿರುವ ಒಟ್ಟು 6.11 ಎಕರೆ ಜಮೀನಿಗೆ ಬೇಲಿ ನಿರ್ಮಿಸಿ ಎರಡು ತಿಂಗಳ ಹಿಂದೆ ಭದ್ರಪಡಿಸಿಕೊಂಡಿದ್ದರು. ಆದರೆ ಇಚೆಗೆ ಕೆಲವರು ಕೋರ್ಟ್​ ಮೋರೆ ಹೋಗಿರುವುದಾಗಿ ಹೇಳಿ, ಬೋರ್ಡ್​ ಅಳವಡಿಸಿ ಕೋಡ್​ ಸಂಖ್ಯೆ ಬರೆದಿದ್ದಾರೆ.

ನಗರಸಭೆಯಿಂದ ಅಳವಡಿಸಲಾಗಿದ್ದ ಬೋರ್ಡ್​ಅನ್ನು ಹಾನಿ ಮಾಡಿ ಬೆಂಗಳೂರಿನ ಕೋರ್ಟ್​ಗಳಲ್ಲಿ ಜಮೀನು ಸಂಬಂಧ ದಾವೆ ಇರುವುದಾಗಿ ನಮೂದು ಮಾಡಿದ್ದಾರೆ. ಈ ಬಗ್ಗೆ ಪೌರಾಯುಕ್ತ ನವೀನ್​ಚಂದ್ರ ಅವರ ಗಮನಕ್ಕೆ ಬಂದಿದ್ದು, ಅಧ್ಯೆ ಲಕ್ಷಿ$್ಮದೇವಮ್ಮ, ಕಂದಾಯ ಅಧಿಕಾರಿ ವೇಣು, ಇತರೆ ಸಿಬ್ಬಂದಿ ಭೇಟಿ ನೀಡಿ ತೆರವುಗೊಳಿಸಿದರು.

ಈ ಜಾಗ ನಮಗೆ ಸೇರಿದ್ದು, ನಾವು ಏನು ಬೇಕಾದರು ಮಾಡಿಕೊಳ್ಳುತ್ತೇವೆ ಎಂದು ಕೆಲ ವ್ಯಕ್ತಿಗಳು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಅಧಿಕಾರಿಗಳು ಈ ಜಾಗವು ನಗರಸಭೆಗೆ ಸೇರಿದೆ. ದಾಖಲೆಗಳು ಇದ್ದರೆ ಸಲ್ಲಿಸಿ, ಆನಂತರ ಚರ್ಚಿಸೋಣ ಎಂದು ತಾಕೀತು ಮಾಡಿದರು. ಮಧ್ಯ ಪ್ರವೇಶ ಮಾಡಿದ ಪೊಲೀಸರು ಖಾಸಗಿಯವರನ್ನು ದೂರ ಕಳುಹಿಸಿದರು.

ಖಾಸಗಿ ವ್ಯಕ್ತಿಯು ಟ್ರಂಚ್​ ನಿರ್ಮಿಸಲು ಕರೆಸಿದ್ದ ಜೆಸಿಬಿ ಯಂತ್ರವನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಜಾಗವನ್ನು ಕಬಳಿಸಲು ಯತ್ನಿಸಿರುವ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆ.

ಅತಿಕ್ರಮ ಪ್ರವೇಶ ಮಾಡಲು ಯತ್ನಿಸಿರುವ ವ್ಯಕ್ತಿಗಳ ವಿರುದ್ಧ ದೂರು ನೀಡಿ, ಅದೇ ರೀತಿ ನಗರಸಭೆಯ ನಾಮಲಕ ಹಾನಿಪಡಿಸಿರುವವರ ವಿರುದ್ಧ ಕ್ರಮವಹಿಸಿ ಎಂದು ಅಧ್ಯೆ ಲಕ್ಷಿ$್ಮದೇವಮ್ಮ ಸೂಚಿಸಿದರು.

ಪೌರಾಯುಕ್ತ ನವೀನ್​ ಚಂದ್ರ ಮಾತನಾಡಿ, ನಗರಸಭೆಯ ಆಶ್ರಯ ಸಮಿತಿಯಿಂದ ನಿವೇಶನ, ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಿದ್ದು, ಅದರಂತೆ ಜಿಲ್ಲಾಡಳಿತ, ಸರ್ಕಾರದಿಂದ ಅನುಮತಿ ಪಡೆದು, ಖಾಸಗಿಯವರಿಂದ ನಗರಸಭೆಯು 2001-2002ರಲ್ಲೇ ಖರೀದಿ ಮಾಡಿತ್ತು. ಖಾದ್ರಿಪುರ ಸರ್ವೇ ನಂ;34/1ರ ಪೈಕಿ 2.15 ಎಕರೆ, 34/2 2.06 ಎಕರೆ ಹಾಗೂ 33/2ಎ ಪೈಕಿ 3.30 ಎಕರೆ ಜಮೀನು ಸೇರಿ ಒಟ್ಟು 6.11 ಎಕರೆ ಜಾಗ ರಕ್ಷಣೆ ಮಾಡಲಾಗಿದೆ. ಇದನ್ನು ಕೆಲವರು ಕಬಳಿಸಲು ಯತ್ನಿಸಿದ್ದು, ಇದು ಮುಂದುವರೆಯದಂತೆ ನಗರಸಭೆಯಿಂದ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net