

ಬೆಂಗಳೂರು: ಸೈಬರ್ ಕಳ್ಳರು ಮೊದಲು ನಿಮಗೆ ಬಹುಮಾನ ಬಂದಿದೆ ಎಂದು ಎಸ್‌ಎಂಎಸ್, ೆನ್ ಕಾಲ್, ಇಮೇಲ್ ಬರುತ್ತಿದ್ದವು. ಇದೀಗ ಅಂಚೆಯಲ್ಲಿ ರಿಜಿಸ್ಟರ್ ಪೋಸ್ಟ್ ಮೂಲಕ ನಿಮ್ಮ ಮನೆಗೆ ಬರುತ್ತಿದೆ. ಯಾಮಾರಿ ಅದರಲ್ಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅಥವಾ ಅಲ್ಲಿನ ಲಿಂಕ್ ಬಳಸಿ ಕೋಡ್ ನಂಬರ್ ಹೇಳಿದರೆ ಸಾಕು ನಿಮ್ಮ ಬ್ಯಾಂಕ್‌ನಲ್ಲಿ ಖಾತೆಗೆ ಕನ್ನ ಬೀಳಲಿದೆ.
ಹೌದು ಇಂತಹದೊಂದು ರಿಜಿಸ್ಟರ್ ಪೋಸ್ಟ್ ಬಂದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪೊಲೀಸರು ಸಹ ಇಂತಹ ವಂಚಕರ ಬಗ್ಗೆ ಎಚ್ಚರದಿಂದ ಇರಬೇಕೆಂದು ಅರಿವು ಮೂಡಿಸುತ್ತಿದ್ದಾರೆ. ಚಿಕ್ಕಮಗಳೂರಿನ ವ್ಯಕ್ತಿಯೊಬ್ಬರ ಮನೆಗೆ ಭಾರತೀಯ ಅಂಚೆಯ ಕೆಂಪು ಬಣ್ಣದ ರಿಜಿಸ್ಟರ್ ಲಕೋಟೆ ಬಂದಿದೆ. ಲಕೋಟೆ ತೆರೆದು ನೋಡಿದಾಗ ಅದರಲ್ಲಿ ಭಾರತ ಸರ್ಕಾರದ ಲಾಂಛನ ಇರುವ ರಿಜಿಸ್ಟರ್ ಕೋಪನ್ ಮತ್ತು ಅಪ್ಲಿಕೇಷನ್ ಫಾರ್ಮ ಪತ್ತೆಯಾಗಿದೆ. ಕೂಪನ್ ಮೇಲೆ ಸಕ್ಯೆಾಚ್ ಮಾಡಿ ವಾಹನ ಗೆಲ್ಲಿ ಎಂದು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದಿದೆ.
ಸಕ್ಯೆಾಚ್ ಮಾಡಿದಾಗ 12.80 ಲಕ್ಷ ರೂ. ಬಹುಮಾನ ಬಂದಿದೆ. ಅದನ್ನು ಪಡೆಯಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ ಸಹ ಸಲಹೆ ನೀಡಲಾಗಿದೆ. ಜತೆಗೆ ಲಿಂಕ್‌ಯೊಂದು ಮತ್ತು ಅರ್ಜಿ ಇದೆ. ಬಹುಮಾನ ತಮ್ಮದಾಗಿ ಮಾಡಿಕೊಳ್ಳಬೇಕಾದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅಥವಾ ಹೆಲ್ಪ್‌ಲೈನ್ ನಂಬರ್‌ಗೆ ಕರೆ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಬಹುಮಾನದ ಹಣ ಜಮೆ ಆಗಲಿದೆ ಎಂದು ಸಲಹೆ ನೀಡಿದ್ದಾರೆ.
ಒಂದು ವೇಳೆ ಸಾರ್ವಜನಿಕರು ಮೊಬೈನ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಸೈಬರ್ ವಂಚಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ. ಅಥವಾ ಅದಲ್ಲಿನ ಲಿಂಕ್ ಬಳಸಿ ಮೊಬೈಲ್‌ಗೆ ಬರುವ ಕೋಡ್ ನಂಬರ್ ಅಪ್‌ಡೇಟ್ ಮಾಡಿದರೂ ಬ್ಯಾಂಕ್ ಖಾತೆಗೆ ಕನ್ನ ಬೀಳುವುದು ಖಚಿತ.
ಆದರಿಂದ ಅಪರಿಚಿತ ವ್ಯಕ್ತಿಗಳು ಕಳುಹಿಸುವ ಅಂಚೆ ಲಕೋಟೆಯಲ್ಲಿ ಬಹುಮಾನ ಬಂದಿದೆ, ಕಾರು ಗೆದ್ದಿರುವುದಾಗಿ ಆಮಿಷವೊಡ್ಡಿ ಕ್ಯೂಆರ್ ಕೋಡ್ ಅಥವಾ ಲಿಂಕ್ ನಲ್ಲಿ ಕ್ಲಿಕ್ ಮಾಡಿ ಅರ್ಜಿ ಬ್ಯಾಂಕ್ ಖಾತೆ ವಿವರ ತುಂಬುವಂತೆ ಸೂಚಿಸಿದ್ದರೆ ಎಚ್ಚರ ವಹಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.