ಯಲ್ಲಮ್ಮಗುಡ್ಡದಲ್ಲಿ ಹೊಸ್ತಿಲ ಹುಣ್ಣಿಮೆ ಆಚರಣೆ

15
ಯಲ್ಲಮ್ಮಗುಡ್ಡದಲ್ಲಿ ಹೊಸ್ತಿಲ ಹುಣ್ಣಿಮೆ ನಿಮಿತ್ತ ರುದ್ರ ಗಣಶಾಂತಿ ಹೋಮ ನೆರವೇರಿಸಲಾಯಿತು. ಅಜ್ಜಯ್ಯ ಶಾಸಿ, ಈರಯ್ಯ ಹಿರೇಮಠ, ಮರೆಗುದ್ದಿ ಮಹಾಂತೇಶ ಶಾಸಿ, ಶಿವಶಂಕ್ರಯ್ಯ, ಪಂಡಿತ ಕೆ.ಎಸ್. ಯಡೂರಯ್ಯ, ಪಿ.ರಾಜಶೇಖರಯ್ಯ ಇತರರಿದ್ದರು.
Published on

ಉಗರಗೋಳ: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶ್ರದ್ಧೆ-ಭಕ್ತಿಯಿಂದ ಮಂಗಳವಾರ ಹೊಸ್ತಿಲ ಹುಣ್ಣಿಮೆ ಆಚರಿಸಲಾಯಿತು. ಶ್ರೀದೇವಿಯ ಕಂಕಣ ಮಂಗಳಸೂತ್ರ ವಿಸರ್ಜನೆ ಪ್ರಯುಕ್ತ ಲೋಕ ಕಲ್ಯಾಣಕ್ಕಾಗಿ ರುದ್ರ ಗಣಶಾಂತಿ ಹೋಮ ಹಾಗೂ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನೆರವೇರಿತು.

ದೇವಿಯ ತವರು ಮನೆಯಾದ ಸವದತ್ತಿ ತಾಲೂಕಿನ ಹರಳಕಟ್ಟಿಯಿಂದ ಗ್ರಾಮಸ್ಥರು ಸೀರೆ, ಕುಪ್ಪಸ, ದಂಡಿನಮಾಲೆ, ಬಳೆಗಳು,ಅರಿಶಿಣ, ಕುಂಕುಮದೊಂದಿಗೆ ಆಗಮಿಸಿ ವಿಧಿ-ವಿಧಾನ ಪೂರೈಸಿದರು.

ಹೂಲಿ ಹಿರೇಮಠದ ಪಂಡಿತ ಅಜ್ಜಯ್ಯ ಶಾಸಿ, ಈರಯ್ಯ ಹಿರೇಮಠ, ಮರೆಗುದ್ದಿ ಮಹಾಂತೇಶ ಶಾಸಿ, ಶಿವಶಂಕ್ರಯ್ಯ, ಪಂಡಿತ ಕೆ.ಎಸ್.ಯಡೂರಯ್ಯ, ಪಿ.ರಾಜಶೇಖರಯ್ಯ, ಬಸನಗೌಡ ಪರಶಋಷಿ, ಪರಸನಗೌಡ ಕಾಳಂಗೌಡ್ರ ಹೋಮ ನೆರವೇರಿಸಿದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ, ವೈ.ವೈ.ಕಾಳಪ್ಪನವರ, ರಮೇಶ ಗೋಮಾಡಿ, ಈರಣ್ಣ ಚಂದರಗಿ, ಅಧೀಕ್ಷಕ ನಾಗರತ್ನಾ ಚೋಳಿನ, ಅಲ್ಲಮಪ್ರಭು ಪ್ರಭುನವರ, ಆರ್.ಎಚ್. ಸವದತ್ತಿ, ಸಿ.ಎನ್.ಕುಲಕರ್ಣಿ, ಸದಾನಂದ ಈಟಿ, ಪ್ರಭು ಹಂಜಗಿ, ಮಲ್ಲಯ್ಯ ತೋರಗಲ್ಲಮಠ, ಭೀಮಣ್ಣ ಬಾರ್ಕಿ, ನ್ಯಾಮದೇವ ಹುಲಗನ್ನವರ, ಗುರುನಾಥಗೌಡ ರೇಣ್ಕಿಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net