ಪಾರ್ಕ್ ಸ್ವಚ್ಛತೆಗಿಳಿದ ಕಾಗೆಗಳು! ಕಾವ್ ಕಾವ್ ಕಾಗೆಗಳಿಂದ ಸ್ವಚ್ಛತಾ ಅಭಿಯಾನ

Crow
Published on

ನವದೆಹಲಿ: ಸಾಮಾನ್ಯವಾಗಿ ಕಾಗೆಗಳಿಗೆ ಆಹಾರ ಸಿಕ್ಕರೆ ಬೇರೆ ಕಾಗೆಗಳನ್ನು ಕರೆದು ಒಟ್ಟಿಗೆ ತಿನ್ನುತ್ತವೆ. ಈ ವೇಳೆ ಕೆಲವರು ಕಾಗೆ ಕಿರುಚಿದರೆ ಸಂಬಂಧಿಕರು ಬರುತ್ತಾರೆ, ಕಾಗೆಯನ್ನು ಮುಟ್ಟಿದರೆ ಅಶುಭ ಎನ್ನುತ್ತಾರೆ. ಇನ್ನು ಕೆಲವರು ಕಾವ್ ಕಾವ್ ಎಂದು ಕರೆದು ಆಹಾರ ನೀಡುತ್ತಾರೆ. ಆದರೆ ಇಲ್ಲೊಂದು ಕಾಗೆ ಗಲೀಜು ಮಾಡಿದ ಜಾಗವನ್ನು ಸ್ವಚ್ಛಗೊಳಿಸುತ್ತದೆ.

ವಾಸ್ತವವಾಗಿ, ಸಿಗರೇಟ್ ತುಂಡುಗಳು ಹೆಚ್ಚಾಗಿ ಫ್ರಾನ್ಸ್‌ನ ಉದ್ಯಾನವನದಲ್ಲಿ ಕಂಡುಬರುತ್ತವೆ. ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಬದಲಾಗಿಲ್ಲ.  ಹೀಗಾಗಿ ಕಾಗೆಗಳಿಗೆ ಸಿಗರೇಟ್ ತುಂಡುಗಳು ಕಂಡು ಬಂದರೂ ತಕ್ಷಣ ಕಸದ ತೊಟ್ಟಿಗೆ ಎಸೆಯಲು ತರಬೇತಿ ನೀಡಲಾಗುತ್ತದೆ.

2018 ರಿಂದ, ಫ್ರಾನ್ಸ್‌ನ ಪಶ್ಚಿಮ ಪ್ರದೇಶದ ಥೀಮ್ ಪಾರ್ಕ್‌ನ ಅಧಿಕಾರಿಗಳು ಉದ್ಯಾನವನವನ್ನು ಸ್ವಚ್ಛವಾಗಿಡಲು ಒಂದು ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಕಾಗೆಗಳಿಗೆ ತರಬೇತಿ ನೀಡಲು ಆರಂಭಿಸಿದೆ. ಉದ್ಯಾನದಲ್ಲಿ ಎಲ್ಲೆಂದರಲ್ಲಿ ಸಿಗರೇಟ್ ತುಂಡುಗಳು ಅಥವಾ ಇನ್ನಾವುದೇ ತ್ಯಾಜ್ಯ ಕಂಡು ಬಂದರೆ ತಕ್ಷಣ ಅದನ್ನು ಎತ್ತಿಕೊಂಡು ಡಸ್ಟ್ ಬಿನ್ ಗೆ ಹಾಕುವ ತರಬೇತಿ ನೀಡಲಾಯಿತು.

ಅಂದಿನಿಂದ ಇದು ಕಾಗೆಗಳ ಕೆಲಸ. ಇಲ್ಲಿಂದ ಅಲ್ಲಿಗೆ ಹೋಗುವುದೇ ಇವರ ಕೆಲಸ ಕಸವಿದ್ದರೂ  ತಮ್ಮ ಕೆಲಸ ಮುಗಿಸುತ್ತಾರೆ. ಅವರಿಗೆ ತರಬೇತಿ ನೀಡಲು ತಿಂಗಳುಗಳೇ ಬೇಕಾಯಿತು ಎಂದು ಉದ್ಯಾನವನದ ಅಧಿಕಾರಿ ಬಹಿರಂಗಪಡಿಸಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net