

ಬೂಂಡಿ: ಮದುವೆಗೆಂದು ಹೊರಟಿದ್ದ ಬಸ್ಸು ನದಿಗೆ ಬಿದ್ದಿದ್ದು, ಒಂದೇ ಕುಟುಂಬದ 24 ಜನರು ದುರ್ಮರಣ ಹೊಂದಿರುವ ಘಟನೆ ರಾಜಸ್ಥಾನದ ಬೂಂಡಿಯಲ್ಲಿ ನಡೆದಿದೆ.
ಇಂದು ಮದುವೆಯಿದ್ದ ಕಾರಣ ವರನ ಕಡೆಯವರು ಬಸ್ಸಿನಲ್ಲಿ ಹೊರಟಿದ್ದರು. 40 ಜನರಿದ್ದ ಬಸ್ಸು ಬೂಂಡಿಯ ಪಾಪ್ಡಿಗಾಂವ್ ಬಳಿ ಬ್ರಿಡ್ಜ್ನಿಂದ ಆಯ ತಪ್ಪಿ ನದಿಯೊಳಗೆ ಬಿದ್ದಿದೆ. ಇದುವರೆಗೆ ಸುಮಾರು 24 ಜನರು ಮೃತರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ನದಿಯಲ್ಲಿರುವ ಬಸ್ಸಿನಿಂದ ಮೃತ ದೇಹಗಳನ್ನು ಹೊರೆತೆಗೆಯಲಾಗುತ್ತಿದೆ. (ಏಜೆನ್ಸೀಸ್)