Assembly Election Results| ಬಿಜೆಪಿ ಏನಾದರೂ 20 ಸ್ಥಾನ ಗೆದ್ದರೆ ನನ್ನ ಹೆಸರು ಚೇಂಜ್​​; ಕಾಂಗ್ರೆಸ್​ ನಾಯಕಿಯ ಹೇಳಿಕೆ ವೈರಲ್​

Supriya Shrinate
Published on

ನವದೆಹಲಿ: ಲೋಕಸಭೆ ಬಳಿಕ ನಡೆದ ಮೊದಲ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Assembly Election) ಬಿಜೆಪಿ (BJP) ಹಾಗೂ ಕಾಂಗ್ರೆಸ್​ಗೆ (Congress) ಸಿಹಿ-ಕಹಿ ಲಭಿಸಿದ್ದು, ಮುಂಬರುವ ಮಹಾರಾಷ್ಟ್ರ (Maharashtra) ಹಾಗೂ ಜಾರ್ಖಂಡ್​ (Jharkhand) ವಿಧಾನಸಭೆಗೆ (Assembly) ದಿಕ್ಸೂಚಿಯಾಗುವ ಸಾಧ್ಯತೆಯಿದೆ. ಹರಿಯಾಣದಲ್ಲಿ (Haryana) ಆರಂಭಿಕ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಆ ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದು, ಗೆದ್ದು ಬೀಗಲು ಸಜ್ಜಾಗಿದ್ದ ಕಾಂಗ್ರೆಸ್​ ಆಸೆಗೆ ತಣ್ಣೀರು ಎರಚಿದೆ.

ಆರಂಭಿಕ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಮುನ್ನಡೆ ಗಳಿಸಿತ್ತು. ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮಯಾಚರಣೆ (Celebration) ಕೂಡ ಆರಂಭವಾಗಿತ್ತು. ಆದರೆ ಕೆಲವೇ ಹೊತ್ತಿನಲ್ಲಿ ಟ್ರೆಂಡ್ ಬದಲಾಗಿದ್ದು, ಬಿಜೆಪಿ ಮುನ್ನಡೆ ಗಳಿಸಿತು. ಆದರೆ, ಕಾಂಗ್ರೆಸ್​ ನಾಯಕಿಯೊಬ್ಬರು ಚುನಾವಣೆ ಸಮಯದಲ್ಲಿ ನೀಡಿದ್ದ ಹೇಳಿಕೆಯೊಂದು ಸಖತ್​ ವೈರಲ್​ ಆಗಿದ್ದು, ಟ್ರೋಲ್​ ಆಗುತ್ತಿದೆ.

ಚುನಾವಣೆ (Election) ಸಮಯದಲ್ಲಿ ಖಾಸಗಿ ಸುದ್ದಿ ಮಾಧ್ಯಮಗಳು ನಡೆಸಿದ ಪ್ಯಾನಲ್​ ಡಿಬೇಟ್​ನಲ್ಲಿ (Panel Debate) ಪಾಲ್ಗೊಂಡಿದ್ದ ಕಾಂಗ್ರೆಸ್​ ವಕ್ತಾರೆ (Congress Spokesperson) ಸುಪ್ರಿಯಾ ಶ್ರೀನಾಟೆ (Supriya Shrinate) ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ (Haryana Assembly Elections) ಬಿಜೆಪಿ ಏನಾದರೂ 20ಸ್ಥಾನಗಳನ್ನು ಗೆದ್ದರೆ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದರು. ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಹರಿಯಾಣದಲ್ಲಿ ಬಿಜೆಪಿ ಏನಾದರೂ 20 ಸ್ಥಾನಗಳಲ್ಲಿ ಗೆಲುವು ಕಂಡರೆ ನಾನು ಅದನ್ನು ಉತ್ತಮ ಸಾಧನೆ ಎಂದು ಪರಿಗಣಿಸುತ್ತೇನೆ. ಒಂದು ವೇಳೆ ಬಿಜೆಪಿ ಏನಾದರೂ 20ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದರೆ ನಾನು ನನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೇನೆ ಎಂದು ಮಾಧ್ಯಮಗಳ ಪ್ಯಾನಲ್​ ಡಿಬೇಟ್​ನಲ್ಲಿ ಹೇಳಿದ್ದರು. ಇದೀಗ ಚುನಾವಣೆ ಫಲಿತಾಂಶ (Election Result) ಹೊರಬಿದಿದ್ದು, ಹರಿಯಾಣದಲ್ಲಿ ಬಿಜೆಪಿ ಪ್ರಚಂಡ ದಿಗ್ವಿಜಯದತ್ತ ದಾಪುಗಾಲಿರಿಸಿದೆ. ಒಂದು ವೇಳೆ ಸುಪ್ರಿಯಾ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರಾ ಅಥವಾ ತಪ್ಪುತ್ತಾರಾ ಎಂದು ಕಾದು ನೋಡಬೇಕಿದೆ.

ಲೋಕಸಭೆಯ (Loksabha) ಬಳಿಕ ನಡೆಯುತ್ತಿರುವ ಮೊದಲ ರಾಜ್ಯ ವಿಧಾನಸಭೆ ಚುನಾವಣೆ ಪಲಿತಾಂಶವು (Assembly Election Results) ಮುಂಬರುವ ಮಹಾರಾಷ್ಟ್ರ (Maharashtra) ಹಾಗೂ ಜಾರ್ಖಂಡ್ (Jharkhand)​ ಎಲೆಕ್ಷನ್​ಗೆ ದಿಕ್ಸೂಚಿಯಾಗಿದ್ದು, ಬಿಜೆಪಿ ನೇತೃತ್ವದ ಎನ್​ಡಿಎಗೆ ಈ ಚುನಾವಣೆ ದೊಡ್ಡ ಅಗ್ನಿಪರೀಕ್ಷಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net