VIDEO: ರಸ್ತೆ ಮಧ್ಯೆ ತಾಯಿ-ಮಗಳ ಹತ್ಯೆಗೆ ಯತ್ನ​; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

CCTV
Published on

ಬೆಂಗಳೂರು: ಇಲ್ಲಿನ ವಿದ್ಯಾಪೀಠ ರಸ್ತೆಯಲ್ಲಿ ತಾಯಿ-ಮಗಳನ್ನು ಹತ್ಯೆ ಮಾಡಲು ಯತ್ನಿಸಿದ ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸೆಪ್ಟೆಂಬರ್​ 4ರಂದು ಸಂಜೆ 7.40ರ ಹೊತ್ತಿಗೆ ಘಟನೆ ನಡೆದಿದೆ. ತಾಯಿ ದೀಪಾ ಶ್ರೀಕುಮಾರ್ ಮತ್ತು ಮಗಳು ಹಿಷಿತಾ ದ್ವಿಚಕ್ರವಾಹನದಲ್ಲಿ ವಿದ್ಯಾಪೀಠ ರಸ್ತೆಯಲ್ಲಿ ತೆರಳುತ್ತಿದ್ದರು. ಇನ್ನೊಂದು ಬೈಕ್​​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದೀಪಾ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ತಡೆಯಲು ಹೋದ ಹಿಷಿತಾ ಮೇಲೆ ಕೂಡ ದಾಳಿ ಮಾಡಿದ್ದಾರೆ. ಅಷ್ಟರಲ್ಲಿ ಸಾರ್ವಜನಿಕರು ಸೇರಿದ್ದರಿಂದ ಕೂಡಲೇ ಅಲ್ಲಿಂದ ಎಸ್ಕೇಪ್​ ಆಗಿದ್ದಾರೆ.  ಇದನ್ನೂ ಓದಿ: ಕೇರಳ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್​ ಪತ್ನಿಗೆ ಗಂಡುಮಗು ಜನನ

ದೀಪಾ ಅವರು ಆಸ್ಟಿನ್​ ಸ್ಕೂಲ್​ ಸಂಸ್ಥಾಪಕ ಶ್ರೀಕುಮಾರ್ ಅವರ ಎರಡನೇ ಪತ್ನಿ. ಇವರಿಬ್ಬರ ನಡುವೆ ಆಸ್ತಿ ವಿವಾದವಿದೆ. ಕೋರ್ಟ್​ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಇದೀಗ ಶ್ರೀಕುಮಾರ್​, ಅವರ ಪುತ್ರ ಜಯಂತ್​, ಪುತ್ರಿ ಮೋನಿಷಾ ಮತ್ತು ಅಳಿಯ ನವೀನ್​ ಅವರೇ ದೀಪಾ ಮತ್ತು ಹಿಷಿತಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿ.ಕೆ.ಅಚ್ಚುಕಟ್ಟು ಠಾಣೆಯಲ್ಲಿ ಈ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಘಟನೆ ನಡೆದು ಮೂರು ದಿನವಾದರೂ ಆರೋಪಿಗಳನ್ನು ಪೊಲೀಸರು ಬಂಧಿಸಲಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net