ಗ್ರಾಮ ಪಂಚಾಯಿತಿ ಮಾಜಿ ಸದಸ್ಯನನ್ನು ತೋಟದಲ್ಲಿ ಅಟ್ಟಾಡಿಸಿಕೊಂಡು ಹೊಡೆದ ಐವರ ಗುಂಪು

Galate 1 June 20
Published on

ಹಾಸನ: ಜಮೀನು ವಿವಾದದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುನೀಲ್​ ಎಂಬುವರ ಮೇಲೆ ಐದು ಜನರ ಗುಂಪು ತೀವ್ರ ಹಲ್ಲೆ ಮಾಡಿದೆ.

ತೋಟವೊಂದರಲ್ಲಿ ತೆಂಗಿನ ಗರಿ ಮಟ್ಟೆಯಲ್ಲಿ ಸುನೀಲ್​ ಅವರಿಗೆ ಹೊಡೆದಿದ್ದಾರೆ. ಅವರು ತಪ್ಪಿಸಿಕೊಂಡು ಹೋದರೂ ಬಿಡಲಿಲ್ಲ. ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮದನೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಧನಂಜಯ್​, ಸತೀಶ್​, ಕುಮಾರ್​ ಹಾಗೂ ನಟೇಶ್​ ವಿರುದ್ಧ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಡೆದಾಟದಲ್ಲಿ ಗಾಯಗೊಂಡ ಸುನೀಲ್​ ಸೇರಿ ಮತ್ತಿತರರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net