ಸಪ್ತೋತ್ಸವ ಸಂಭ್ರಮದಲ್ಲಿ ಕೃಷ್ಣ ಮಠ

mng
Published on

ಉಡುಪಿ: ಪರ್ಯಾಯ ಪಲಿಮಾರು ಮಠದ ಕೊನೆಯ ಸಪ್ತೋತ್ಸವ ಗುರುವಾರ ರಾತ್ರಿ ಕೃಷ್ಣ ಮಠದಲ್ಲಿ ವೈಭವದಿಂದ ಆರಂಭಗೊಂಡಿದ್ದು, ಜ.15ರವರೆಗೆ ನಡೆಯಲಿದೆ. ಹಿಂದು ಧರ್ಮದ ಆಧಾರ ಗ್ರಂಥಗಳಾದ ನಾಲ್ಕು ವೇದಗಳು, ಪಂಚರಾತ್ರ, ಮಹಾಭಾರತ, ರಾಮಾಯಣ ಪಾರಾಯಣದೊಂದಿಗೆ ಸಪ್ತಶಾಸ್ತ್ರೋತ್ಸವ ಆಚರಿಸಲಾಗುತ್ತಿದೆ.

ಉತ್ಸವದ ಮೊದಲ ದಿನ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಸುವರ್ಣ ಪಲ್ಲಕ್ಕಿಯಲ್ಲಿರಿಸಿ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಯಿತು. ಮಹಾಪೂಜೆ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರು, ಗರುಡ ರಥದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಗಳನ್ನು ಸ್ಥಾಪಿಸಿ ರಥೋತ್ಸವ ನೆರವೇರಿಸಲಾಯಿತು. ಮೊದಲ ದಿನದಲ್ಲಿ ತಮಿಳುನಾಡಿನ ಶ್ರೀರಂಗಮ್ಂದ ಆಗಮಿಸಿದ ತ್ರಯೀ ವಿದ್ಯಾಪೀಠ ವಿದ್ಯಾರ್ಥಿಗಳು, ವಿದ್ವಾಂಸರು ಋಗ್ವೇದ ಪಾರಾಯಣ ಮಾಡಿದರು. 14ರಂದು ಮಕರ ಸಂಕ್ರಮಣ ದಿನ ಸಂಜೆ ಶ್ರೀಕೃಷ್ಣ, ಮುಖ್ಯಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ತೆಪ್ಪೋತ್ಸವ, ಕೃಷ್ಣಮಠದ ವಾರ್ಷಿಕ ಜಾತ್ರೆಯಾಗಿರುವ ಸಪ್ತೋತ್ಸವದ ಕೊನೆಯ ದಿನ 15ರಂದು ಹಗಲು ರಥೋತ್ಸವ ‘ಚೂಣೋತ್ಸವ’ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net