

ಕಿರುವಾರ ಎಸ್.ಸುದರ್ಶನ್ ಕೋಲಾರ
ನನೆಗುದಿಗೆ ಬಿದ್ದಿದ್ದ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಪ್ರಕ್ರಿಯೆಗಳು ಶುರುವಾಗಿವೆ. ನಾಮಪತ್ರ ಸಲ್ಲಿಸಲು ಶಾಸಕರು, ಮಾಜಿ ನಿರ್ದೇಶಕರು ಹಾಗೂ ಹೊಸಬರು ಮುಂದಾಗಿದ್ದಾರೆ.
2014ರ ಮುಂಚೆ ದಿವಾಳಿಯಾಗಿದ್ದ ಬ್ಯಾಂಕ್ ಸೆಕ್ಷನ್ 11 ಅರ್ಹತೆ ಕಳೆದುಕೊಂಡು ಗ್ರಾಹಕರಿಗೆ ಸಾಲ ಸೌಲಭ್ಯ ಕಲ್ಪಿಸುವ ಶಕ್ತಿಯೂ ಇಲ್ಲದಂತಾಗಿತ್ತು. 2014ರಲ್ಲಿ ಅಧಿಕಾರಕ್ಕೆ ಬಂದ ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿ ಎರಡೂ ಅವಧಿಯಲ್ಲೂ ಬ್ಯಾಂಕ್ನ್ನು ಸುಧಾರಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿತು. ನಬಾರ್ಡ್, ಅಪೆಕ್ಸ್ ಬ್ಯಾಂಕ್ಗಳ ಮೇಲೆ ಒತ್ತಡ ತಂದು ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲೆಗಳ ಮಹಿಳೆಯರಿಗೆ, ರೈತರಿಗೆ ಸಾಲ ನೀಡಲಾಯಿತು. ಸಾಲ ನೀಡುವುದಕ್ಕೆ ಸಿಮೀತಗೊಳ್ಳದೆ ಸಕಾಲಕ್ಕೆ ವಸೂಲಿ ಮಾಡಿಸಿ, ಖಾಸಗಿ ಬ್ಯಾಂಕ್ಗಳ ಮಾದರಿಯಲ್ಲಿ ಗ್ರಾಹಕರಿಗೆ ಸೇವೆ ಕಲ್ಪಿಸಲು ಮುಂದಾಯಿತು.
ಬ್ಯಾಂಕ್ ಪರಿಸ್ಥಿತಿಯು ಸುಧಾರಣೆಯಾದ ನಂತರ ಕೋಲಾರ&ಚಿಕ್ಕಳ್ಳಾಪುರ ಡಿಸಿಸಿ ಬ್ಯಾಂಕ್ ರಾಜ್ಯ, ದೇಶದ ಮಟ್ಟದಲ್ಲಿ ಬಾರಿ ಸದ್ದು ಮಾಡಿತ್ತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಆಡಳಿತ ಮಂಡಳಿ ನಿರ್ದೇಶಕರು ಕೋಲಾರಕ್ಕೆ ಭೇಟಿ ನೀಡಿ ಅಭಿವೃದ್ಧಿ ಕುರಿತು ಮಾಹಿತಿ ಪಡೆದುಕೊಂಡು ಹೋಗಿದ್ದರು.
2023ರ ನ.17ರಂದು ಆಡಳಿತ ಮಂಡಳಿಯ ಅವಧಿ ಮುಗಿದ ನಂತರ ಚುನಾವಣೆ ಘೋಷಣೆಯಾಗಬೇಕಿದ್ದ ಸಮಯಕ್ಕೆ ಚೇಳೂರು, ಮಂಚೇನಹಳ್ಳಿ ತಾಲೂಕುಗಳಿಗೂ ನಿರ್ದೇಶಕ ಸ್ಥಾನ ನೀಡುವಂತೆ ಕೆಲವರು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯದಲ್ಲಿ ಉಭಯದಾರರ ಅರ್ಜಿ ವಿಚಾರಣೆಯಾಗಿ ಚುನಾವಣೆ ನಡೆಸುವಂತೆ ಆದೇಶ ಆದ ಹಿನ್ನಲೆಯಲ್ಲಿ ಪ್ರಕ್ರಿಯೆಗಳು ಶುರುವಾಗಿವೆ. ಮೇ 18ರಿಂದ ಉಮೇದುವಾರಿಕೆ ಸಲ್ಲಿಸಲು ಪ್ರಾರಂಭವಾಗಿದ್ದು, ಮೇ 20 ಕೊನೆಯ ದಿನಾಂಕವಾಗಿದೆ.
ಈಗಾಗಲೇ ಬ್ಯಾಂಕಿನ ಮಾಜಿ ನಿರ್ದೇಶಕರೂ ಹಾಗೂ ಕೆಜಿಎ್ ಶಾಸಕಿ ರೂಪಕಲಾ, ಬಾಗೇಪಲ್ಲಿ ಶಾಸಕ ಕೆ.ವಿ.ಸುಬ್ಬಾರೆಡ್ಡಿ, ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಮಾಜಿ ನಿರ್ದೇಶಕ ಕೆ.ವಿ.ದಯಾನಂದ ಸೇರಿ ಇನ್ನು ಹಲವು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಜತೆಗೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಸೇರಿ ಹಲವರು ಕೊನೇ ದಿನ ನಾಮಪತ್ರ ಸಲ್ಲಿಸಲಿದ್ದಾರೆ.
* ಬೆಂಬಲಿಗರ, ಕಾರ್ಯಕರ್ತರ ಅಸಮಾಧಾನ
ಡಿಸಿಸಿ ಬ್ಯಾಂಕ್ ಮೇಲೆ ಆಡಳಿತ ಪಕ್ಷದ ಶಾಸಕರ ಕಣ್ಣು ಬಿದ್ದಿದ್ದು, ಇದು ಸಾರ್ವಜನಿಕರ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಶಾಸಕಿ ರೂಪಕಲಾ ಹಿಂದಿನ ಅವಧಿಯಲ್ಲೂ ನಿರ್ದೇಶಕರಾಗಿದ್ದರು. ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಹೊಸದಾಗಿ ಬಾಗೇಪಲ್ಲಿ ಶಾಸಕ ಕೆ.ವಿ.ಸುಬ್ಬಾರೆಡ್ಡಿ ಉಮೇದುವಾರಿಕೆ ಸಲ್ಲಿಸಿದ್ದು, ಶಾಸಕ ಕೊತ್ತೂರು ಜಿ.ಮಂಜುನಾಥ್ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಅಧಿಕಾರದಲ್ಲಿರುವವರು ಮತ್ತೊಂದು ಕ್ಷೇತ್ರದ ಅಧಿಕಾರಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ. ಅವರ ಬದಲು ಬೇರೆಯವರಿಗೆ ಅವಕಾಶ ಮಾಡಿಕೊಬಹುದಿತ್ತಲ್ಲ ಎಂದು ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
* ಆಮಿಷವೊಡ್ಡುವ ಯತ್ನ
ಎರಡೂ ಜಿಲ್ಲೆಗಳಲ್ಲಿ 1,129 ಒಟ್ಟು ಸಹಕಾರ ಸಂಗಳಿದ್ದು, 495 ಸಂಗಳು ಮತದಾನದ ಹಕ್ಕು ಹೊಂದಿದ್ದು, 625 ಅನರ್ಹಗೊಂಡಿವೆ. 9 ಸಂಗಳು ಮತದಾನದ ಹಕ್ಕು ಕಳೆದುಕೊಂಡಿವೆ. ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಆಕಾಂಗಳು ಗೆಲುವಿಗೆ ಕಸರತ್ತು ನಡೆಸುತ್ತಿದ್ದಾರೆ. ಮತದಾರರನ್ನು ಸೆಳೆಯಲು ಉಡುಗೊರೆ, ಪ್ರವಾಸದ ಆಮಿಷವೊಡ್ಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮುಳಬಾಗಿಲು ತಾಲೂಕಿನ ಕೆಲ ಮತದಾರರನ್ನು ಆಕಾಂಯೊಬ್ಬರು ಪ್ರವಾಸ ಕಳುಹಿಸಿಕೊಟ್ಟಿದ್ದಾರೆ ಎಂಬುದು ಗುಟ್ಟಾಗಿಯೇನೂ ಉಳಿದಿಲ್ಲ. ನಾಮಪತ್ರಗಳ ಪರಿಶೀಲನೆ, ವಾಪಸಾತಿ ಮುಗಿದ ನಂತರ ಅಂತಿಮ ಕಣದಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ವಿವಿಧ ಕ್ಷೇತ್ರದ ನಿರ್ದೇಶಕ ಸ್ಥಾನದ ಆಕಾಂಗಳು ಮತದಾರರನ್ನು ಈಗಾಗಲೇ ಸಂಪರ್ಕಿಸಿ ಬೆಂಬಲಿಸುವಂತೆ ಕೋರಿದ್ದಾರೆ.
* ನಾಮಪತ್ರ ಸಲ್ಲಿಕೆಗೆ ಇಂದು ಕೊನೇ ದಿನ
ಎರಡೂ ಜಿಲ್ಲೆಗಳ ತಾಲೂಕುಗಳಲ್ಲಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಯಾರು ಎಂಬುದು ಅಂತಿಮವಾಗಿದ್ದು, ನಾಮಪತ್ರ ಸಲ್ಲಿಸುತ್ತಿದ್ದಾರೆ. ಮುಳಬಾಗಿಲು ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ರುಪತಿ ಗೌಡ ಅವರು ಶಾಸಕ ಸಮೃದ್ಧಿ ಮಂಜುನಾಥ್ ನೇತೃತ್ವದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದು, ಬಾಕಿ ತಾಲೂಕುಗಳಲ್ಲಿ ಇನ್ನು ಅಭ್ಯರ್ಥಿಗಳು ಅಂತಿಮಗೊಂಡಿಲ್ಲ. ಮಂಗಳವಾರ ಉಮೇದುವಾರಿಕೆ ಸಲ್ಲಿಸಲು ಕೊನೇ ದಿನಾಂಕವಾಗಿದ್ದು, ಯಾವ ಯಾವ ಪಕ್ಷದಿಂದ ಯಾರ್ಯಾರು ಅಭ್ಯರ್ಥಿಗಳಾಗಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.
ಮತದಾರರ ಪಟ್ಟಿ....
ಸಹಕಾರ ಸಂಗಳ ಸದತ್ವ ವರ್ಗ ಮತ ಕ್ಷೇತ್ರ ಮತದಾರರ ಸಂಖ್ಯೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೋಲಾರ 12
(ಎ ವರ್ಗ) ಮಾಲೂರು 14
ಬಂಗಾರಪೇಟೆ 13
ಕೆಜಿಎ್ 3
ಮುಳಬಾಗಿಲು 19
ಶ್ರೀನಿವಾಸಪುರ 5
ಚಿಂತಾಮಣಿ 15
ಶಿಡ್ಲಟ್ಟ 9
ಚಿಕ್ಕಬಳ್ಳಾಪುರ 16
ಗುಡಿಬಂಡೆ 8
ಬಾಗೇಪಲ್ಲಿ 13
ಗೌರಿಬಿದನೂರು 18
ಚೇಳೂರು 9
ಮಂಚೇನಹಳ್ಳಿ 11
ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ
(ಬಿ ವರ್ಗ) ಕೋಲಾರ&ಚಿಕ್ಕಬಳ್ಳಾಪುರ 9
ಪಟ್ಟಣ ಸಹಕಾರ ಬ್ಯಾಂಕ್ಗಳು
ಕೃಷಿಯೇತರ ಪತ್ತಿನ ಸಹಕಾರ ಸಂಘಗಳು
(ಸಿ ವರ್ಗ) ಕೋಲಾರ&ಚಿಕ್ಕಬಳ್ಳಾಪುರ 48
ಹಾಲು ಸಹಕಾರ ಸಂಘಗಳು
(ಡಿ ವರ್ಗ) ಕೋಲಾರ 126
ಚಿಕ್ಕಬಳ್ಳಾಪುರ 147
ಒಟ್ಟು 18 495