

ಬೆಂಗಳೂರು: ನನ್ನನ್ನ ಯಾವ ಜಾತಿಗೆ ಸೇರಿಸಬೇಡಿ, ನಾನು ಎಲ್ಲ ಸಮುದಾಯಕ್ಕೆ ಸೇರಿದವನು. ಬೆಂಗಳೂರು ಸೆಂಟ್ರಲ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ಬದ್ಧನಿದ್ದೇನೆ ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಎಲ್ಲ ವರ್ಗದ ಜನ ಗುರುತಿಸುತ್ತಾರೆ. ನಾನು ಎಲ್ಲರಿಗೂ ಸ್ಪಂದಿಸುತ್ತೇನೆ. ಕಲಾವಿದನಾಗಿಯೂ ಕೆಲಸ ಮಾಡುತ್ತೇನೆ. ನನ್ನನ್ನ ಯಾವ ಜಾತಿಗೆ ಸೇರಿಸಬೇಡಿ. ನಾನು ಎಲ್ಲ ಸಮುದಾಯಕ್ಕೆ ಸೇರಿದವನು. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕ್ರಿಶ್ವಿಯನ್ ಸಮುದಾಯವಿದೆ. ಎಲ್ಲೂ ಕ್ರಿಶ್ವಿಯನ್ನರಿಗೆ ಟಿಕೆಟ್ ಕೊಟ್ಟಿಲ್ಲ. ಹಾಗಾಗಿ ನನಗೆ ಟಿಕೆಟ್ ಕೊಡಬೇಕು. ನಮ್ಮ ಪಕ್ಷ ಏನು ತೀರ್ಮಾನ ಮಾಡುತ್ತೆ ಮಾಡಲಿ. ನಾನು ಅದಕ್ಕೆ ಪೂರಕವಾಗಿ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಬಡವರ ಪಕ್ಷ ಎಂದರೆ ಅದು ಕಾಂಗ್ರೆಸ್. ನಾನು ಎಲ್ಲ ಚುನಾವಣೆಯಲ್ಲೂ ಕೆಲಸ ಮಾಡುತ್ತ ಬಂದಿದ್ದೇನೆ. ನನ್ನನ್ನು ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಒಂದೊಂದೇ ಮೆಟ್ಟಿಲು ಹತ್ತಬೇಕಿದೆ. ಎಲ್ಲರ ಆಶೀರ್ವಾದ ನಮಗೆ ಬೇಕಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲೂ ಕೆಲಸ ಇವೆ. ಆ ಎಲ್ಲ ಕೆಲಸವನ್ನೂ ನಾನು ಮಾಡುತ್ತೇನೆ ಎಂದು ಸಾಧು ಕೋಕಿಲ ಹೇಳಿದರು.