ಕನ್ಹಯ್ಯ ಲಾಲ್​ ಹತ್ಯೆ ಪ್ರಕರಣ: ರಾಜಸ್ಥಾನ ಪೊಲೀಸರಿಂದ ಮತ್ತೊಂದು ಮಹತ್ವದ ಕ್ರಮ..

Hindu
Published on

ನವದೆಹಲಿ: ನೂಪುರ್​ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಟೈಲರ್ ಕನ್ಹಯ್ಯ ಲಾಲ್​ನನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜಸ್ಥಾನ ಪೊಲೀಸರು ಮತ್ತೊಂದು ಮಹತ್ವದ ಕ್ರಮಕೈಗೊಂಡಿದ್ದಾರೆ.

ಕೊಲೆಡುಕರಿಗೆ ಭಯೋತ್ಪಾದಕ ಸಂಘಟನೆಯ ಸಂಪರ್ಕ ಇರುವುದರಿಂದ ರುಂಡ ಬೇರ್ಪಡಿಸಿ ಹತ್ಯೆ ಮಾಡಿದ್ದನ್ನೂ ಭಯೋತ್ಪಾದನೆ ಎಂದೇ ಪರಿಗಣಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ಬಂಧಿಸಿದ ಪೊಲೀಸರಿಗೆ ಬಡ್ತಿ ನೀಡಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ. ಜೀವದ ಹಂಗುತೊರೆದು ಇಬ್ಬರು ಪಾತಕಿಗಳನ್ನು ಹಿಡಿದ ತೇಜ್‌ಪಾಲ್, ನರೇಂದ್ರ, ಶೌಕತ್, ವಿಕಾಸ್ ಮತ್ತು ಗೌತಮ್ ಎಂಬ ಐವರು ಪೊಲೀಸರಿಗೆ ಬಡ್ತಿ ನೀಡಲಾಗುವುದು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಇದರ ಬೆನ್ನಿಗೇ ರಾಜಸ್ಥಾನ ಪೊಲೀಸರಿಂದ ಮತ್ತೊಂದು ಮಹತ್ವದ ಕ್ರಮ ಜರುಗಿದೆ. ಅದೇನೆಂದರೆ ಉದಯಪುರದಲ್ಲಿನ ಟೈಲರ್ ಕನ್ಹಯ್ಯ ಲಾಲ್ ಸಾವಿಗೂ ಮುನ್ನ ಉಂಟಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಪೊಲೀಸರು ಸೂಕ್ತ ಕ್ರಮಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಠಾಣೆಯ ಎಎಸ್​ಐ ಹಾಗೂ ಎಸ್​ಎಚ್​ಒಗಳನ್ನು ಅಮಾನತುಗೊಳಿಸಲಾಗಿದೆ ಎಂದು ರಾಜಸ್ಥಾನ ಡಿಜಿಪಿ ಎಂ.ಎಲ್. ಲಾಥರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net