

ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ, ಗ್ಯಾರಂಟಿಗಳ ಜಾರಿಯಲ್ಲಿ ಗೊಂದಲಗಳು ಮುಂದುವರಿದಿರುವ ಬೆನ್ನಲ್ಲೇ ಶಾಸಕ ಆಶ್ವತ್ಥನಾರಾಯಣ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅಶ್ವತ್ಥನಾರಾಯಣ ಗ್ಯಾರಂಟಿಗಳನ್ನು ಪ್ರತಿಯೊಬ್ಬರಿಗೂ ಈ ಸರ್ಕಾರ ಕೊಡಬೇಕು ಆದಾಯದ ಮಾನದಂಡ ಮೇಲೆ ಮಾತ್ರ ಕೊಡುತ್ತೀವೆ ಎಂದು ಹೇಳುತ್ತಿದ್ಧಾರೆ. ಗ್ಯಾರಂಟಿಗಳಿಗೆ ದಿನಾಂಕ ಮಾತ್ರ ಘೋಷಣೆ ಮಾಡಿದ್ಧಾರೆ. ಆದರೆ, ಅಧಿಕೃತವಾಗಿ ಚಾಲನೆಯಾಗಿಲ್ಲ ಕಿಡಿಕಾರಿದ್ಧಾರೆ.
ಕಾಂಗ್ರೆಸ್ನವರು ಮಾತು ತಪ್ಪುತ್ತಿದ್ಧಾರೆ. ಅವರು ನುಡಿದಂತೆ ಜನತೆಗೆ ಉಚಿತವಾಗಿ ಗ್ಯಾರಂಟಿಗಳನ್ನು ಕೊಡಲಿ. ನಿಮ್ಮ ಜೇಬಿಂದ ಹಣ ಹಾಕಿ ಯೋಜನೆಗಳನ್ನು ಕೊಡ್ತಿಲ್ವಲ್ಲ. ನನಗೂ ಫ್ರೀ, ನಿನಗೂ ಫ್ರೀ ಎಂದ ಕಾಂಗ್ರೆಸ್ ನಾಯಕರು ಎಲ್ಲಿದ್ದೀರಪ್ಪ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸರ್ಕಾರಕ್ಕೆ ಜನರಿಗೆ ಗ್ಯಾರಂಟಿಗಳನ್ನು ಕೊಡುವುದಿಕ್ಕೆ ಇಷ್ಟ ಇಲ್ಲ. ಕಳ್ಳನಿಗೆ ಪಿಳ್ಳೆ ನೆವ ಎಂಬಂತೆ ಪ್ರತಿದಿನ ಹೊಸ ಕಾರಣಗಳನ್ನು ಹುಡುಕುತ್ತಿದ್ಧಾರೆ. ಕಾಂಗ್ರೆಸ್ನವರಿಗೆ ಭಂಡತನ ಬಂದಿದೆ. ಶಿವಕುಮಾರ್ ಅವರೇ ಈ ಕೂಡಲೇ ಜನರಿಗೆ ಅಕ್ಕಿ ಕೊಡಿ. ಕೇಂದ್ರ ಸರ್ಕಾರ ಈಗಾಗಲೇ ಐದು ಕೆಜಿ ಅಕ್ಕಿಯನ್ನು ಕೊಡುತ್ತಿದೆ. ನೀವು ಇನ್ನು ಒಂದು ಕೆಜಿಯನ್ನು ಸಹ ಕೊಟ್ಟಿಲ್ಲ ಎಂದು ಕಿಡಿಕಾರಿದ್ಧಾರೆ.
ಅನ್ನಭಾಗ್ಯ ಯೋಜನೆಯಡಿ ಕಾಂಗ್ರೆಸ್ನವರಿಗಿಂತ ಬಿಜೆಪಿಯವರು ಜನತೆಗೆ ಹೆಚ್ಚಿನ ಅಕ್ಕಿಯನ್ನು ಕೊಟ್ಟಿದ್ದೇವೆ. ನಮ್ಮ ವಿರುದ್ಧ ಆರೋಪ ಮಾಡುವ ಮುನ್ನ ಸಿದ್ದರಾಮಯ್ಯನವರೇ ಅಂಕಿಅಂಶಗಳ ಸಮೇತ ಮಾತನಾಡಿ. ಜನತೆಗೆ ಐದು ಕೆಜಿ ಅಕ್ಕಿ ಕೊಡಿ ಮಿಕ್ಕ ಧಾನ್ಯದ ಹಣವನ್ನು ಅವರ ಖಾತೆಗೆ ವರ್ಗಾಯಿಸಿ ಎಂದು ಸಲಹೆ ನೀಡಿದ್ಧಾರೆ.
ಕಾಂಗ್ರೆಸ್ ಪಕ್ಷ ಘೋಷಿಸಿರುವ ಐದು ಗ್ಯಾರಂಟಿಗಳ ಜಾರಿ ಗೊಂದಲ್ಲಿದೆ. ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣ ಗೊಂದಲದ ಗೂಡಾಗಿದ್ದು, ಬಸ್ ಡೋರ್ಗಳನ್ನೇ ಕಿತ್ತು ಹಾಕುತ್ತಿದ್ಧಾರೆ. ಈಗೆ ಆದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಹೇಳಿದ್ಧಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯಿಸಿ ನಾನು ಆ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ವತಿಯಿಂದ ಯಾರನ್ನೇ ಆಯ್ಕೆ ಮಾಡಿದ್ದರೂ ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ. ಪಕ್ಷ ಯಾವುದೆ ಜವಾಬ್ದಾರಿ ಕೊಟ್ಟರೂ ಅದನ್ನು ನಿಭಾಯಿಸಲು ಸಿದ್ದನಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಸಚಿವ ಆಶ್ವತ್ಥನಾರಾಯಣ ಪರೋಕ್ಷವಾಗಿ ತಾವು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ಧಾರೆ.
ಇನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಗೆ ಪ್ರತಿಕ್ರಿಯಿಸಿ ಇದರಿಂದ ನಗರಕ್ಕೆ ಯಾವುದೇ ಪ್ರಯೋಜನವಿಲ್ಲ. ಡಿಕೆಶಿ ಅವರನ್ನು ಜನತೆ ಕಳೆದ 35 ವರ್ಷಗಳಿಂದ ನೋಡಿಕೊಂಡು ಬಂದಿದ್ದಾರೆ. ಅವರು ಏನೆಂದು ಎಲ್ಲರಿಗೂ ಗೊತ್ತಿದೆ. ಅವರಿಂದ ಏನು ಆಗಲ್ಲ ಜನರ ಬಗ್ಗೆ ಇವರಿಗೆ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ಧಾರೆ.
ಹಿಂದೆ ನಾನು ರಾಮನಗರದ ಉಸ್ತುವಾರಿ ಸಚಿವನಾಗಿದ್ದ ಸಮಯದಲ್ಲಿ ನಿನಗೂ ಜಿಲ್ಲೆಗೂ ಏನು ಸಂಬಂಧ ಎಂದು ಕೇಳಿದ್ದರು. ಈಗ ನಾನು ಅವರನ್ನ ಕೇಳುತ್ತೇನೆ ನಿನಗೂ ಬೆಂಗಳೂರಿಗೂ ಏನು ಸಂಬಂಧ ಶಿವಕುಮಾರ. ರಾಮನಗರ ನನ್ನ ಪೂರ್ವಿಕರ ಜಿಲ್ಲೆ. ನನಗೆ ಕೇಳಿದ ಹಾಗೇ ನಿಮಗೂ ಕೇಳ್ತಿದ್ದೀನಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ಧಾರೆ.
ಡಿಕೆಶಿ ರಿಯಲ್ ಎಸ್ಟೇಟ್ ವ್ಯಾಪಾರಿ ಅವರಿಂ ಬೆಂಗಳೂರಿಗೆ ಏನು ಉಪಯಫಗವಿಲ್ಲ. ಅವರದ್ದು ಬರಿ ದ್ವೇಷ, ಕಿರುಕುಳದ ರಾಜಕಾರಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ಆಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ಧಾರೆ.