ಬಂಟರ ಸಂಘ ಅಧ್ಯಕ್ಷರಾಗಿ ಅಶೋಕ್ ಶೆಟ್ಟಿ ಆಯ್ಕೆ

bant
Published on

ಬೆಂಗಳೂರು: ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿ ಸಿ.ಎ.ಅಶೋಕ್ ಶೆಟ್ಟಿ ಮತ್ತು ಕಾಂತಿ ಶೆಟ್ಟಿ ಹಾಗೂ ಜೆ. ಸಂತೋಷ್ ಶೆಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಂಘಕ್ಕೆ ಭಾನುವಾರ ಚುನಾವಣೆ ನಡೆಯಿತು. ಅಂದು ಸಂಜೆಯೇ ಲಿತಾಂಶ ಪ್ರಕಟವಾಗಿದೆ. ಗೌರವ ಕಾರ್ಯದರ್ಶಿ ಹುದ್ದೆಗೆ ಅವಿರೋಧವಾಗಿ ಎಚ್. ವಿಜಯ್ ಶೆಟ್ಟಿ ಹಾಲಾಡಿ, ಕಾರ್ಯದರ್ಶಿಯಾಗಿ ಸಿ.ರೈ. ಜಯಶ್ರೀ, ಖಜಾಂಚಿಯಾಗಿ ಎಚ್.ಅಶೋಕ್ ಕುಮಾರ್ ಶೆಟ್ಟಿ ಹಾಗೂ ಪ್ರತಾಪ್ ಶೆಟ್ಟಿ, ಎಂ. ಸಂತೋಷ್ ಕುಮಾರ್ ಶೆಟ್ಟಿ ಸೇರಿ 15 ಮಂದಿ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

ಬಂಟರ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾಗಿ ‘ಬೆಂಗಳೂರು ಬಂಟರ ಸಂಘ’ ಕಾರ್ಯನಿರ್ವಹಿಸುತ್ತಿದೆ. ಚುನಾವಣೆಯಲ್ಲಿ ವಿವಿಧ ಸ್ಥಾನಗಳಿಗೆ ಒಟ್ಟು 48 ಮಂದಿ ಸ್ಪರ್ಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net