ಗೋವಾದ ರಾಜ್ಯಪಾಲರಾಗಿ ಅಶೋಕ್ ಗಜಪತಿ ರಾಜು ನೇಮಕ! Ashok Ganapathi Raju

Ashok Gajapathi Raju
Published on

ಹರಿಯಾಣ, ಗೋವಾಗೆ ಹೊಸ ರಾಜ್ಯಪಾಲರ ನೇಮಕ

ನವದೆಹಲಿ: ( Ashok Ganapathi Raju ) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎರಡು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನ ಸೋಮವಾರ (ಜುಲೈ 14) ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಿದೆ.

ಹರಿಯಾಣ, ಗೋವಾ ಮತ್ತು ಲಡಾಖ್‌ಗೆ ರಾಜ್ಯಪಾಲರು ನೇಮಕಗೊಂಡಿದ್ದಾರೆ. ಅವರು ತಮ್ಮ ಕಚೇರಿಗಳ ಉಸ್ತುವಾರಿ ವಹಿಸಿಕೊಳ್ಳುವ ದಿನಾಂಕದಿಂದ ನೇಮಕಾತಿಗಳು ಜಾರಿಗೆ ಬರುತ್ತವೆ.

ಅಶೋಕ್ ಗಜಪತಿ ರಾಜು ಅವರನ್ನು ಗೋವಾ ರಾಜ್ಯಪಾಲರನ್ನಾಗಿ ನೇಮಿಸಿದೆ. ಆಶಿಮ್ ಕುಮಾರ್ ಘೋಷ್ ಅವರನ್ನು ಹರಿಯಾಣ ರಾಜ್ಯಪಾಲರನ್ನಾಗಿ ಮತ್ತು ಕವಿಂದರ್ ಗುಪ್ತಾ ಅವರನ್ನು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ರಾಷ್ಟ್ರಪತಿ ಭವನ ಇದನ್ನು ಅಧಿಕೃತವಾಗಿ ಘೋಷಿಸಿದೆ.

ಇದು ಟಿಡಿಪಿ ಹಿರಿಯ ನಾಯಕ ಅಶೋಕ್ ಗಜಪತಿ ರಾಜು ಅವರಿಗೆ ದೊರೆತ ಅಪರೂಪದ ಗೌರವ. ಅವರು ಈಗಾಗಲೇ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮೋದಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ ಖ್ಯಾತಿ ಗಳಿಸಿದರು. ಅದಕ್ಕೂ ಮೊದಲು ಅವರು ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಅವರು ಟಿಡಿಪಿಯಲ್ಲಿ ಪಾಲಿಟ್‌ಬ್ಯೂರೋ ಸದಸ್ಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net