ಅಮಿಗೋಸ್ ಆಶಿಕಾ ರಂಗನಾಥ್; ತಮಿಳು ಬಳಿಕ ತೆಲುಗಿಗೆ ಎಂಟ್ರಿ ಕೊಟ್ಟ ಕನ್ನಡತಿ

Ashika
Published on

ಬೆಂಗಳೂರು: ಆಶಿಕಾ ರಂಗನಾಥ್ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬಿಜಿಯಿದ್ದಾರೆ. ಅದರ ನಡುವೆ ತಮಿಳು, ತೆಲುಗಿನಲ್ಲೂ ನಟಿಸುತ್ತಿದ್ದಾರೆ. ಅವರು ನಟಿಸಿರುವ ಮೊದಲ ತಮಿಳು ಚಿತ್ರ ‘ಪಟ್ಟಾತು ಅರಸನ್’ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿತ್ತು. ಇದೀಗ ಆಶಿಕಾ ನಟಿಸಿರುವ ಮೊದಲ ತೆಲುಗು ಚಿತ್ರ ‘ಅಮಿಗೋಸ್’ ಕೂಡ ಬಿಡುಗಡೆಗೆ ಸಿದ್ಧವಾಗಿದ್ದು, ರಿಲೀಸ್ ದಿನಾಂಕ ಘೋಷಣೆಯಾಗಿದೆ.

ರಾಜೇಂದ್ರ ರೆಡ್ಡಿ ಮೊದಲ ಬಾರಿಗೆ ನಿರ್ದೇಶಿಸಿರುವ ‘ಅಮಿಗೋಸ್’ ಚಿತ್ರದಲ್ಲಿ ಆಶಿಕಾ ರಂಗನಾಥ್, ನಂದಮೂರಿ ಕಲ್ಯಾಣ್ ರಾಮ್ೆ ನಾಯಕಿಯಾಗಿದ್ದಾರೆ. ವಿಶೇಷ ಅಂದರೆ ‘ಜನತಾ ಗ್ಯಾರೇಜ್’, ‘ರಂಗಸ್ಥಳಂ’, ‘ಪುಷ್ಪಾ’, ‘ಸರ್ಕಾರು ವಾರಿ ಪಾಟ’ ಸೇರಿದಂತೆ ಹಲವು ದೊಡ್ಡ ಬಜೆಟ್ ಸಿನಿಮಾಗಳನ್ನು ನಿರ್ವಿುಸಿರುವ ಮೈತ್ರಿ ಮೂವಿ ಮೇಕರ್ಸ್ ‘ಅಮಿಗೋಸ್’ ಚಿತ್ರವನ್ನು ನಿರ್ಮಾಣ ಮಾಡಿದ್ದು, ದೊಡ್ಡ ಪ್ರೊಡಕ್ಷನ್ ಹೌಸ್ ಮೂಲಕ ತೆಲುಗಿನಲ್ಲಿ ಲಾಂಚ್ ಆಗುತ್ತಿರುವ ಸಂಭ್ರಮ ಆಶಿಕಾ ರಂಗನಾಥ್ ಅವರದು. ಚಿತ್ರದಲ್ಲಿ ಅವರು ಇಶಿಕಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೆ ಆಶಿಕಾ ಫಸ್ಟ್ ಲುಕ್ ಕೂಡ ಬಿಡುಗಡೆ ಯಾಗಿದೆ. ‘ಅಮಿಗೋಸ್’ 2023ರ ಫೆ. 10ರಂದು ರಿಲೀಸ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net