

ಬೆಂಗಳೂರು: ಸ್ಯಾಂಡಲ್ವುಡ್ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಇತ್ತೀಚೆಗೆ ಬಿಡುಗಡೆಗೊಂಡ ನಾಗಾರ್ಜುನ ಅಭಿನಯದ ನಾ ಸಾಮಿ ರಂಗ ಚಿತ್ರದ ಮೂಲಕ ಟಾಲಿವುಡ್ಗೆ ಪಾದಾರ್ಪಣೆ ಮಾಡಿದ್ದು, ಈ ಚಿತ್ರದಲ್ಲಿನ ನಟನೆಗೆ ತೆಲುಗು ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡರು. ಈ ಹಿಂದೆಯೇ ನಿರ್ದೇಶಕ ವಿಜಯ್ ಬಿನ್ನಿ, ಈ ಸಿನಿಮಾದ ಬಳಿಕ ಟಾಲಿವುಡ್ನಲ್ಲಿ ಆಶಿಕಾಗೆ ಆಫರ್ಗಳು ಹರಿದುಬರಲಿವೆ ಎಂದು ತಿಳಿಸಿದ್ದರು. ಆ ಮಾತು ಇದೀಗ ನಿಜವಾದಂತಿದೆ.
ಕನ್ನಡ ಚಿತ್ರರಂಗದ ಜನಪ್ರಿಯ ಸ್ಟಾರ್ ನಟಿಮಣಿಯರ ಹೆಸರುಗಳಲ್ಲಿ ಒಂದಾದ ಆಶಿಕಾ ರಂಗನಾಥ್ ಅವರು ನಟ ನಾಗಾರ್ಜುನ ಅಭಿನಯದ ನಾ ಸಾಮಿ ರಂಗ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಆಶಿಕಾ ಅಭಿನಯವನ್ನು ಮೆಚ್ಚಿದ ತೆಲುಗು ಪ್ರೇಕ್ಷಕರು ಚಿತ್ರದಲ್ಲಿ ನಟಿಯ ನೋಟ ಮತ್ತು ಅಭಿನಯ ಎರಡಕ್ಕೂ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪ್ರಶಂಸೆಗಳ ಬೆನ್ನಲ್ಲೇ ನಟಿಗೆ ತೆಲುಗು ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಆಫರ್ಗಳು ಬಂದಿದ್ದು, ಇಲ್ಲಿಯವರೆಗೆ ಎಷ್ಟು ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎಂಬುದು ಮಾತ್ರ ತಿಳಿದುಬಂದಿಲ್ಲ. ಈ ಬಗ್ಗೆ ಮಾಹಿತಿ ತಿಳಿಯಲು ಅವರ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಆದ್ರೆ, ಸಿನಿ ಮೂಲಗಳ ಪ್ರಕಾರ ತಮಗೆ ಬಂದಿರುವ ಆಫರ್ಗಳನ್ನು ಒಪ್ಪಿಕೊಳ್ಳುವಲ್ಲಿ ಆಶಿಕಾ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).