ಏಷಿಯಾ ಟುಡೇ ಮೀಡಿಯಾ ಸಂಸ್ಥೆಯ ಪ್ರಶಸ್ತಿ ಪ್ರದಾನ

award1
Published on

ಬೆಂಗಳೂರು:
ನಂದಿ ಹೋಮಿಯೋಪತಿ ಕೇಂದ್ರಗಳ ಸಮೂಹಗಳ ಅಧ್ಯಕ್ಷರಾದ ಶಿವಾನಂದ್ ಹೂಗಾರ್ ಅವರಿಗೆ ಪ್ರತಿಷ್ಠಿತ ಏಷಿಯಾ ಟುಡೇ ಮೀಡಿಯಾ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಗುರುತಿಸಿ ನೀಡುವ ಅತ್ಯುನ್ನತ ಗೌರವದ ಸಮಾಜ ಸೇವೆ ಸಾಧನೆ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಪ್ರದಾನ ಮಾಡಿದರು. ಲೋಕಸಭಾ ಸದಸ್ಯರಾದ ಡಾ.ಸಿ.ಎನ್. ಮಂಜುನಾಥ್, ಏಷಿಯಾ ಟುಡೇ ಮೀಡಿಯಾ ಅಧ್ಯಕ್ಷ ಪಿ.ಕೆ.ಚೌದರಿ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.
ಆರೋಗ್ಯ ಕ್ಷೇತ್ರಕ್ಕೆ ಶಿವಾನಂದ್ ಎಸ್ ಹೂಗಾರ್ ಕುಟುಂಬ ಹಲವು ದಶಕಗಳಿಂದ ಮಹತ್ವದ ಸೇವೆ ಸಲ್ಲಿಸುತ್ತಿದ್ದು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಹೋಮಿಯೋಪತಿ ಕ್ಷೇತ್ರದಲ್ಲಿ ಅವರ ಹೆಜ್ಜೆ ಗುರುತುಗಳು ಅನುಕರಣೀಯ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net