ಎರಡು ತಿಂಗಳು ಪೂರ್ಣಗೊಳಿಸಿತು ರಷ್ಯಾ-ಯೂಕ್ರೇನ್​ ಯುದ್ಧ!

war
Published on

ಕೀವ್​: 21ನೇ ಶತಮಾನದ ಅತಿದೊಡ್ಡ ದುರಂತದಲ್ಲಿ ಸೇರಿಕೊಂಡಿರುವ ರಷ್ಯಾ-ಯೂಕ್ರೇನ್​ ಯುದ್ಧ ಎರಡು ತಿಂಗಳು ಪೂರೈಸಿ ಮೂರನೇ ತಿಂಗಳಿಗೆ ಪ್ರವೇಶಿಸಿದೆ.

ಈ ನಡುವೆ ಮೊದಲಿನಿಂದಲೂ ಯೂಕ್ರೇನ್​ ಪರ ನಿಂತಿರುವ ಅಮೆರಿಕ ಮತ್ತೆ 165ಮಿಲಿಯನ್​ ಡಾಲರ್​ ಮಿಲಿಟರಿ ನೆರವು ನೀಡುವುದಾಗಿ ಘೋಷಿಸಿದೆ. ಮೌರಿಪೊಲ್​ ಆಜೊಸ್ತಲ್​​ ಉಕ್ಕಿನ ಸ್ಥಾವರದಲ್ಲಿ 2000 ಯೂಕ್ರೇನಿಗರು ಸಿಲುಕಿದ್ದು,ಹೋರಾಟವನ್ನು ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.

ಎರಡು ತಿಂಗಳಿನಿಂದ ಯುದ್ಧದಿಂದ ನಲುಗಿರುವ ಯೂಕ್ರೇನ್​ ಸಂಪೂರ್ಣ ಧ್ವಂಸವಾಗಿದೆ. ಆದರೂ ಇಲ್ಲಿನ ಜನತೆ ಹಾಗೂ ಮಿಲಿಟರಿ ಪಡೆಯ ಆತ್ಮಸ್ಥೈರ್ಯ ರಷ್ಯಾ ಸೇನೆಯನ್ನು ಕಂಗೆಡುವಂತೆ ಮಾಡಿರುವುದು ಸುಳ್ಳಲ್ಲ.ರಷ್ಯಾ ಅಪ್ರಚೋದಿತ ದಾಳಿಯಿಂದ ಅಧ್ಯಕ್ಷ ಪುಟಿನ್​​ಗೆ ಎಚ್ಚರಿಕೆ ನೀಡುತ್ತಾ ಬರುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಎಂದಿಗೂ ಯೂಕ್ರೇನ್​ ಪರವಾಗಿರುವುದಾಗಿ ತಿಳಿಸಿದ್ದಾರೆ.

ಯುದ್ಧಾರಂಭದ ಬಳಿಕ ರಾಯಭಾರಿಗಳ ಮೊದಲ ಭೇಟಿಯಲ್ಲಿ 700 ಮಿಲಿಯನ್​ ಡಾಲರ್ ನೆರವನ್ನು ಅಮೆರಿಕ ನೀಡಿತ್ತು.ಮಾರಿಯೊಪೊಲ್​ನ ಬಂದರು ತೀವ್ರ ಪತನದ ಅಂಚಿನಲ್ಲಿರುವುದರಿಂದ ಯೂಕ್ರೇನ್​ ಅಧ್ಯಕ್ಷ ಝಲೆನ್​ಸ್ಕಿ ಅವರು ಮಿಲಿಟರಿ ನೆರವು ಬಗ್ಗೆ ಭಾನುವಾರವಷ್ಟೇ ಸಭೆ ನಡೆಸಿದ್ದರು.

ಅಲ್ಲದೇ ಎರಡು ತಿಂಗಳ ಸುಧೀರ್ಘ ಯುದ್ಧದಲ್ಲಿ 21,000 ಯೋಧರನ್ನು ರಷ್ಯಾ ಕಳೆದುಕೊಂಡಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net