ಕೇಜ್ರಿವಾಲ್​ ಪತ್ನಿಗೆ ಕರೊನಾ ಸೋಂಕು; ಕ್ವಾರಂಟೈನ್​ಗೆ ಒಳಗಾದ ಸಿಎಂ

kejri
Published on

ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಪತ್ನಿ ಸುನಿತಾ ಅವರಿಗೆ ಕರೊನಾ ಸೋಂಕು ದೃಢವಾಗಿದೆ. ಆ ಹಿನ್ನೆಲೆಯಲ್ಲಿ ಅರವಿಂದ್​ ಅವರು ಕ್ವಾರಂಟೈನ್​ ಆಗಿದ್ದಾರೆ.

ದೆಹಲಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಏರಿಕೆ ಕಂಡುಬರುತ್ತಿದೆ. ಸೋಮವಾರ ರಾತ್ರಿ 10 ಗಂಟೆಯಿಂದ ಏಪ್ರಿಲ್​ 26ರವರೆಗೆ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಈ ಒಂದು ಸೋಂಕಿನ ಮೊದಲನೇ ಅಲೆಯ ಸಮಯದಲ್ಲಿ ಅರವಿಂದ್​ ಕೇಜ್ರಿವಾಲ್​ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಗಂಟಲು ನೋವು, ಜ್ವರದಿಂದ ಬಳಲುತ್ತಿದ್ದ ಅವರಿಗೆ ಕರೊನಾ ನೆಗೆಟಿವ್​ ವರದಿ ಬಂದಿತ್ತು.

ಕ್ವಾರಂಟೈನ್​ ಆಗಿದ್ದರೂ ಮನೆಯಿಂದಲೇ ಎಲ್ಲ ಕೆಲಸವನ್ನು ಮುಖ್ಯಮಂತ್ರಿಗಳು ನಿರ್ವಹಿಸುತ್ತಿರುವುದಾಗಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ತಿಳಿಸಿದ್ದಾರೆ. ರಾಜ್ಯದಲ್ಲಿ ಕರೊನಾ ನಿಯಂತ್ರಣಕ್ಕೆ ಸಕಲ ಪ್ರಯತ್ನ ಮಾಡುವುದಾಗಿ ಅವರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net