Country Made Part 2 - ಚಿತ್ರ,ವಿಚಿತ್ರ ಪಾತ್ರಗಳ ಅರವಿಂದ್ ಕೌಶಿಕ್ ಚಿತ್ರ

ಕಂಟ್ರಿ ಮೇಡ್ ಭಾಗ 2
ಕಂಟ್ರಿ ಮೇಡ್ ಭಾಗ 2
Published on
"ನಮ್​ ಏರಿಯಾಲ್​ ಒಂದಿನ', "ತುಘ್ಲಕ್​​', "ಹುಲಿರಾಯ', "ಅರ್ಧಂಬರ್ಧ ಪ್ರೇಮಕಥೆ'ಯ ನಿರ್ದೇಶಕ ಅರವಿಂದ್​ ಕೌಶಿಕ್​ ಇದೀಗ "ಕಂಟ್ರಿ ಮೇಡ್​ ಭಾಗ 2' ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಇದುವರೆಗೂ ಬೇರೆ ಬೇರೆ ಜಾನರ್​ಗಳ ಸಿನಿಮಾ ಮಾಡಿದ್ದ ಅವರು, ಇದೇ ಮೊದಲ ಬಾರಿಗೆ ಗ್ಯಾಂಗ್​ಸ್ಟರ್​ ಕಥೆಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈಗಾಗಲೇ ಶೂಟಿಂಗ್​ ಮುಗಿದಿದ್ದು, ಸದ್ಯ ಚಿತ್ರ ಪೋಸ್ಟ್​ - ಪ್ರೊಡಕ್ಷನ್​ ಹಂತದಲ್ಲಿದೆ. ಅದರ ನಡುವೆಯೇ ಇತ್ತೀಚೆಗಷ್ಟೆ ಚಿತ್ರದಲ್ಲಿರುವ ಪಾತ್ರಗಳನ್ನು ಪರಿಚಯಿಸುವ ಟೀಸರ್​ ಬಿಡುಗಡೆ ಮಾಡಿದ್ದಾರೆ. ಕಾಜಲ್​, ಮಿಲ್ಕಿ, ಮಜ್ಜಿಗೆ, ಜೋಕರ್​ ಜಾನಿ, ಪಾಮು, ಪಾಯ್ಸನ್​ ರವಿ, ಬ್ಯಾಂಕಾಕ್​ ಬುಜ್ಜಿ, ಬಾಂಬೆ ಬಂಟಿ, ಮೆಡಿಕಲ್​ ವಾಸು, ರಿಯಲ್​ ಎಸ್ಟೇಟ್​ ರುದ್ರಿ, ಆ್ಯಂಕರ್​ ಅಂಜಲಿ, ಕ್ಯಾಟರಿಂಗ್​ ಗಿರಿ, ಡಿಚ್ಚಿ ದಿನೇಶ, ಡೇರ್​ಡೆವಿಲ್​ ಸರೋಜಾ, ಜಿಮ್​ ಚೇತು, ಲಾಂಗ್​ ಲಕ್ಷ$್ಮಣ... ಹೀಗೆ ಚಿತ್ರ&ವಿಚಿತ್ರ ಪಾತ್ರಗಳನ್ನು ಟೀಸರ್​ ಮೂಲಕ ಪರಿಚಯ ಮಾಡಿಕೊಡಲಾಗಿದೆ. ಚಿತ್ರದ ಬಗ್ಗೆ ಅರವಿಂದ್​ ಕೌಶಿಕ್​, "ನಮ್ಮೂರಲ್ಲಿ ನೊಣಗಳು ಜಾಸ್ತಿ, ಏಕೆಂದರೆ ನಮ್ಮೂರಲ್ಲಿ ಹೆಣಗಳು ಜಾಸ್ತಿ ಎಂಬ ಎಳೆಯನ್ನಿಟ್ಟುಕೊಂಡು ಈ ಚಿತ್ರದ ಕಥೆ ಬರೆದೆ. ದ್ವೇಷ, ರೋಷ, ಸಿಟ್ಟು, ಸೇಡಿನ ಯುದ್ಧಗಳನ್ನು ಹೆಚ್ಚಾಗಿ ಗಂಡಸರು ಮಾಡಿದರೂ, ಗಾಯಗಳಾಗುವುದು ಮನೆಯಲ್ಲಿರುವ ಹೆಂಗಸರಿಗೆ. ಹೊಸಿಲು ದಾಟಿ ಗಂಡಸ್ತನ ಮೆರೆದು ಚಾಕು ಇರಿಯುವ ಗಂಡಸರಿಗೆ, ಮನೆಯಲ್ಲಿನ ಹೆಂಗಸರ ನೆನಪು ಬರುವುದಿಲ್ಲ. ಈ ಅಂಶವನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ. ಚಿತ್ರದಲ್ಲಿ ನಾಯಕ, ನಾಯಕಿ, ಕಾಮಿಡಿಯನ್​ ಅಂತ ಯಾರೂ ಇಲ್ಲ. ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆಯಿದೆ' ಎಂದು ಮಾಹಿತಿ ನೀಡಿದರು. ಚಿತ್ರದಲ್ಲಿ ಅರವಿಂದ್​ ಕೌಶಿಕ್​, ಅಭಿಲಾಷ್​ ದ್ವಾರಕೀಶ್​, ರಾವ್​ ರಾಮ್​, ಶಿಲ್ಪಾ ಅರವಿಂದ್​, ಪ್ರದಿಪ್​, ಗೌರವ್​, ಕುಲದೀಪ್​, ಅಶ್ವಿತಾ, ಸುಜಿತ್​ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಅರ್ಜುನ್​ ರಾಮು ಸಂಗೀತ, ಸೂರ್ಯ ಛಾಯಾಗ್ರಹಣ ಹಾಗೂ ಅಲ್ಟಿಮೇಟ್​ ಶಿವು ಸಾಹಸ ನಿರ್ದೇಶನದಲ್ಲಿ "ಕಂಟ್ರಿ ಮೇಡ್​ 2' ಮೂಡಿಬಂದಿದೆ. 

ಪಾವಗಡದ ನೈಜ ವ್ಯಕ್ತಿಗಳನ್ನಾಧರಿಸಿದ ಕಥೆ

ಅಂದಹಾಗೆ, ನಿರ್ದೇಶಕ ಅರವಿಂದ್​ ಕೌಶಿಕ್​ಗೆ ತುಮಕೂರಿನ ಪಾವಗಡದ ಬಗ್ಗೆ ಮೊದಲಿನಿಂದಲೂ ಒಂದು ರೀತಿಯ ಕುತೂಹಲವಿತ್ತಂತೆ. "2023ರಲ್ಲಿ "ಅರ್ಧಂರ್ಬಧ ಪ್ರೇಮಕಥೆ' ಬಿಡುಗಡೆಯ ಬಳಿಕ ಒಮ್ಮೆ ಪಾವಗಡಕ್ಕೆ ಹೋಗಿದ್ದೆ. ಬಾಲ್ಯದಿಂದಲೂ ನನಗೆ ಬಹಳ ಕಾಡಿದಂತಹ ಊರದು. ಅಲ್ಲೇನಾದರೂ ಶೂಟಿಂಗ್​ ಮಾಡಬೇಕು ಎಂಬ ಆಸೆಯಿತ್ತು. ಆ ಊರಿನಲ್ಲಿ ನಾನು ನೋಡಿದ ಕೆಲ ನಿಜ ಜೀವನದ ವ್ಯಕ್ತಿಗಳನ್ನು ಆಧರಿಸಿ ಪಾತ್ರಗಳನ್ನು ಸೃಷ್ಟಿಸಿದೆ. ಆ ಪಾತ್ರಗಳಿಂದ ಹುಟ್ಟಿದ ಕಥೆಯೇ "ಕಂಟ್ರಿ ಮೇಡ್​ ಭಾಗ 2' ಎಂದು ಕಥೆ ಹುಟ್ಟಿದ ಕಥೆ ಹೇಳಿಕೊಳ್ಳುತ್ತಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net