ಯತ್ನಾಳ್ ಬಿಜೆಪಿ ನಾಯಕರಲ್ಲ ಎಂದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್!

WhatsApp Image 2022-10-16 at 2.58.25 PM
Published on

ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಿಜೆಪಿ ನಾಯಕರಲ್ಲ. ಕೋರ್ ಕಮಿಟಿಯಲ್ಲೂ ಅವರಿಗೆ ಸ್ಥಾನವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ ಕಮಿಟಿಯಲ್ಲಿ ಇದ್ದರೆ ಮಾತ್ರ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿರುತ್ತಾರೆ. ಅವರ ಮಾತಿಗೆ ಮಹತ್ವ ಇರುತ್ತದೆ. ಯತ್ನಾಳ್ ಅವರ ಮನಸ್ಥಿತಿ ಹಾಗಿರುವಾಗ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದರು.

ಯತ್ನಾಳ್ ಅವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದೇವೆ. ಅದಕ್ಕೆ ಅವರು ಉತ್ತರ ನೀಡಿದ್ದಾರೆ. ಶಿಸ್ತು ಸಮಿತಿ ನಿರ್ಣಯ ಕೈಗೊಳ್ಳುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net