ಅರಸೀಕೆರೆ: ತಾಲೂಕು ಸವಿತ ಸಮಾಜದ ಅಧ್ಯಕ್ಷರಾಗಿ ಮುಖಂಡ ಅರುಣ್ ಕುಮಾರ್ ನೇಮಕ ಮಾಡಲಾಗಿದೆ. ನಗರದಲ್ಲಿ ಇತ್ತೀಚೆಗೆ ನಡೆದ ಸಮಾಜದ ಸಭೆಯಲ್ಲಿ ಅಧ್ಯಕ್ಷ ಒಳಗೊಂಡಂತೆ ಪದಾಧಿಕಾರಿಗಳು ನೇಮಕವಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಗೋವಿಂದರಾಜು, ಕಾರ್ಯದರ್ಶಿ-ರಾಜ್ ಮಾಣಿಕ್ಯಂ, ಉಪಾಧ್ಯಕ್ಷ-ಡೋಲ್ ವಿಜಯ್ ಕುಮಾರ್, ಖಜಾಂಚಿ-ರಾಜು, ನಿರ್ದೇಶಕರಾಗಿ ನಾಗರಾಜ ಎ.ಟಿ .ರೇಣುಕುಮಾರ್, ಎ.ಟಿ ಧರ್ಮ, ಜಾವಗಲ್ ನಾರಾಯಣಪ್ಪ, ಬಾಣವಾರ ಕುಮಾರ್ , ಕಣಕಟ್ಟೆ ಸುರೇಶ್, ಶಿವಕುಮಾರ್,ಷಣ್ಮುಗ , ಹಾರನಹಳ್ಳಿ ಸಿದ್ದಾರ್ಥ್, ತಾಲೂಕು ಪ್ರತಿನಿಧಿಯಾಗಿ ಗಂಡಸಿ ಪುಟ್ಟ ನೇಮಕವಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.