Lost Sculptures on Canvas; ಗತವೈಭವ ಸಾರುವ ಶಿಲ್ಪಕಲೆಗಳ ಮಹತ್ವದ ಬಗ್ಗೆ ಕಲಾವಿದೆಯಿಂದ ಜಾಗೃತಿ

India's Lost Sculptures
Published on

ಬೆಂಗಳೂರು: ಹಾಲಿ ನಡೆಯುತ್ತಿರುವ ಇಂಡಿಯಾ ಆರ್ಟ್ ಫೆಸ್ಟಿವಲ್‌ನಲ್ಲಿ ಸ್ಕಲ್ಪ್ಚರ್ಸ್ ಆನ್ ಕ್ಯಾನ್ವಾಸ್ ಶೀರ್ಷಿಕೆ ಅಡಿಯಲ್ಲಿ ಕಲಾವಿದರಾದ ಸತ್ಯ ಗೌತಮನನ್​ ಎಂಬುವವರು ವೀಕ್ಷಕರಿಗೆ ಇತಿಹಾಸದ ಗತವೈಭವವನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. 

ಇಂಡಿಯಾ ಆರ್ಟ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ಚಿತ್ರಗಳೆಲ್ಲವೂ ಭಾರತದಿಂದ ಕಳ್ಳಸಾಗಾಣೆಯಾಗಿ ವಿದೇಶದಲ್ಲಿರುವ ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶನಕ್ಕೆ ಇಡಲಾಗುತಿತ್ತು. ಈ ಚಿತ್ರಕಲೆಗಳೆಲ್ಲವೂ ಚೋಳರ ಕಾಲಕ್ಕೆ ಸೇರಿದ್ದು, ಕ್ರಿಶ. 8-12 ನೇ ಶತಮಾನದ್ದು ಎಂದು ತಿಳಿದು ಬಂದಿದ್ದು, ಈ ಕಾಲಘಟ್ಟವನ್ನು ಕಲೆ, ವಾಸ್ತುಶಿಲ್ಪ ಮತ್ತು ಸಾಹಿತ್ಯಕ್ಕೆ ಸುವರ್ಣ ಯುಗವೆಂದು ಪರಿಗಣಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಕಲಾವಿದೆ ಸತ್ಯ ಗೌತಮನನ್​, ಕಲಾಕೃತಿಯ ಅನೇಕ ಮೂಲ ಶಿಲ್ಪಗಳು ವಸ್ತುಸಂಗ್ರಹಾಲಯಗಳಲ್ಲಿ ಮತ್ತು ಸಂಗ್ರಾಹಕರ ಬಳಿ ಉಳಿದಿವೆ, ನಿರಂತರ ಜಾಗೃತಿ ಹಾಗೂ ಸತತ ಪ್ರಯತ್ನದಿಂದಾಗಿ ಈ ಕಲಾಕೃತಿಗಳನ್ನು ಭಾರತಕ್ಕೆ ವಾಪಸ್​ ತರಲಾಗಿದೆ. ವಿದೇಶದಲ್ಲಿರುವವರು ಕೂಡ ಈ ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದು, ನಮ್ಮ ದೇಶದಲ್ಲಿಯೂ ಇದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಕಲಾವಿದೆ ಸತ್ಯ ಗೌತಮನನ್ ಹೇಳಿದ್ದಾರೆ. 

ಕೃಷಿ ಇಂಜಿನಿಯರ್​ ಪದವಿದರರಾಗಿರುವ ಸತ್ಯ ಗೌತಮನನ್​ ಸಿಂಗಾಪುರದ ನ್ಯಾಷನಲ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ (NAFA) ದಿಂದ ಪಾಶ್ಚಿಮಾತ್ಯ ಕಲೆಗಳಲ್ಲಿ ಅರೆಕಾಲಿಕ ಡಿಪ್ಲೊಮಾವನ್ನು ಹೊಂದಿರುವ ಕಲಾವಿದರಾಗಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net