'ಮೀಮ್ಸ್‌' ಮೂಲಕ ಪ್ರಧಾನಿ ಮೋದಿಯನ್ನು ನಗಿಸಿದ್ದ 'ಕಲಾವಿದ ಕೃಷ್ಣ' ನಿಧನ| atheist-krishna

artist krishna
Published on

ಹೈದರಾಬಾದ್; ನಾಸ್ತಿಕ ಕೃಷ್ಣ ಎಂದೇ ಜನಪ್ರಿಯರಾಗಿರುವ ಫೋಟೋಶಾಪ್ ಕಲಾವಿದ ರಾಧಾಕೃಷ್ಣ ಹಂಗಾ ನ್ಯುಮೋನಿಯಾದಿಂದ ನಿಧನರಾಗಿದ್ದಾರೆ.

ಇವರು ಹಾಸ್ಯಮಯ ಮೀಮ್ಸ್ ಮತ್ತು ಹೃದಯಸ್ಪರ್ಶಿ ಫೋಟೋಶಾಪ್ ಕೆಲಸದಲ್ಲಿ ಪರಿಣತಿ ಹೊಂದಿದ್ದರು. ಕೃಷ್ಣ ಅವರ ಸೃಜನಶೀಲ ಕೆಲಸವು ಬಾಲಿವುಡ್ ತಾರೆ ಅಕ್ಷಯ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇನ್ನೂ ಅನೇಕರಿಂದ ವ್ಯಾಪಕ ಮನ್ನಣೆಯನ್ನು ಗಳಿಸಿತ್ತು. ಅವರು ಹಳೆಯ, ಹರಿದ ಛಾಯಾಚಿತ್ರಗಳ ಭಾವನಾತ್ಮಕ ರಚನೆಗೆ ಹೆಸರುವಾಸಿಯಾಗಿದ್ದರು. ಇವರ ಕಲೆಗೆ ಮೆಚ್ಚಿ ಪ್ರಧಾನಿ ಮೋದಿ ಅವರು ಎಕ್ಸ್​ನಲ್ಲಿ ನಾಸ್ತಿಕ ಕೃಷ್ಣ ಅವರನ್ನು ಅನುಸರಿಸಿದ್ದರು.

ಇವರ ಬಗ್ಗೆ @nainaverse ಬಳಕೆದಾರರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, ಕೃಷ್ಣ ಅಸ್ವಸ್ಥರಾಗಿದ್ದರು ಮತ್ತು ಶಸ್ತ್ರಚಿಕಿತ್ಸೆ ಅಗತ್ಯವಿತ್ತು ಆದರೆ ದುರದೃಷ್ಟವಶಾತ್ ಅವರಿಗೆ ನ್ಯುಮೋನಿಯಾ ತಗುಲಿತು. ಇದು ಅವರ ಸ್ಥಿತಿಯನ್ನು ಗಮನಾರ್ಹವಾಗಿ ಹದಗೆಡಿಸಿತು. ಇಂದು (ಜು 23) ರಂದು ಬೆಳಗ್ಗೆ 4:30 ಕ್ಕೆ ನ್ಯುಮೋನಿಯಾದಿಂದ ಕೃಷ್ಣ ನಿಧನರಾದರು ಎಂದು ತಿಳಿಸಿದ್ದಾರೆ.

(ಏಜೆನ್ಸೀಸ್)

ನಾಸ್ತಿಕ ಕೃಷ್ಣ ಮೂಲತಃ ಒಡಿಶಾದವರಾಗಿದ್ದು, ನಂತರ ವಿಶಾಖಪಟ್ಟಣ ಮತ್ತು ಹೈದರಾಬಾದ್‌ನಲ್ಲಿ ನೆಲೆಸಿದ್ದರು. 2024 ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲಿ ನೃತ್ಯ ಮಾಡುವ ವಿಡಿಯೋದ ನಂತರ ಅವರು ಜನಪ್ರಿಯತೆ ಗಳಿಸಿದರು. ಇದನ್ನು ಸ್ವತಃ ಪ್ರಧಾನಿಯೇ X ನಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದರು. ನಿಮ್ಮೆಲ್ಲರಂತೆ ನಾನು ಕೂಡ ನನ್ನ ನೃತ್ಯವನ್ನು ನೋಡಿ ಆನಂದಿಸಿದೆ. ಇಂತಹ ಸೃಜನಶೀಲತೆ ನಿಜಕ್ಕೂ ಸಂತೋಷ ತಂದಿದೆ ಎಂದು ಪ್ರಧಾನಿ X ನಲ್ಲಿ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net